








ವೇಣೂರು: ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಇಂಡೋರ್ ಸ್ಟೇಡಿಯಂನಲ್ಲಿ ಡಿ. 21ರಂದು ರಾಷ್ಟ್ರಮಟ್ಟದ ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ನಡೆಯಿತು. ಕುಂಭಶ್ರೀ ಶಾಲಾ ಕರಾಟೆ ತರಬೇತುದಾರರಾದ ಜೋಕಿಂ ಪಿಂಟೊ ವಿದ್ಯಾರ್ಥಿಗಳಿಗೆ ಉತ್ತಮ ಮಟ್ಟದ ತರಬೇತಿ ನೀಡಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿರುತ್ತಾರೆ. 7ನೇ ತರಗತಿಯ ವಿದ್ಯಾರ್ಥಿ ಸುಯೋಗ್ ಪ್ರಥಮ, 7ನೇ ತರಗತಿಯ ರಿಶಾನ್ ಪಿ. ಪ್ರಥಮ, 7ನೇ ತರಗತಿಯ ಭವಿತ್ ಪ್ರಥಮ ಸ್ಥಾನ, 6ನೇ ತರಗತಿಯ ಮಹಮ್ಮದ್ ರಾಶಿಕ್ ಪ್ರಥಮ, ಏಳನೇ ತರಗತಿಯ ಪ್ರಥಮ್ ಆರ್ ಭಟ್ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಹೆಮ್ಮೆಯನ್ನು ತಂದಿರುತ್ತಾರೆ. ಅವರಿಗೆ ಶಾಲಾ ಸಂಸ್ಥಾಪಕ ಗಿರೀಶ್ ಕೆ. ಎಚ್. ಹಾಗೂ ಸಂಚಾಲಕ ಅಶ್ವಿತ್ ಕುಲಾಲ್ ಮತ್ತು ಎಲ್ಲಾ ಶಿಕ್ಷಕ ವೃಂದದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.









