ಪ್ರೊ. ಪ್ರಭಾಕರ ನಿಧನ ಹಿನ್ನೆಲೆ: ಡಿ.25ರಂದು ಸಂಜೆ 6 ಗಂಟೆಗೆ ಅಂತ್ಯ ಸಂಸ್ಕಾರ

1

ಉಜಿರೆ: ಧರ್ಮಸ್ಥಳ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಪ್ರಭಾಕರ್ ಅವರು ನಿಧನರಾಗಿದ್ದು, ಡಿ.25ರಂದು ಸಂಜೆ 6 ಗಂಟೆಗೆ ಜೈನ ಧರ್ಮದ ವಿಧಿ ವಿಧಾನಗಳಂತೆ ಅಂತ್ಯ ಸಂಸ್ಕಾರ ನೆರವೇರಲಿದೆ. ಅವರ ಉಜಿರೆಯ ನಿವಾಸದ ಜಮೀನಿನ ವಠಾರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಶರೀರದ ಪ್ರೊ. ಪ್ರಭಾಕರ ಅವರ ಮಗಳು ಶರ್ಮಿಳಾ ಮತ್ತು ಅಳಿಯ ನರೇಂದ್ರ ಲಂಡನಿನಲ್ಲಿರುವುದರಿಂದ, ಆ ಹಿನ್ನೆಲೆಯಲ್ಲಿ ಡಿ.25ರಂದು ಅಂತ್ಯಸಂಸ್ಕಾರಕ್ಕೆ ಸಮಯ ನಿಗದಿ ಮಾಡಲಾಗಿದೆ. ಡಿ.24ರಂದು ಮಧ್ಯಾಹ್ನ 2 ಗಂಟೆವರೆಗೆ ಪಾರ್ಥಿವ ದರ್ಶನಕ್ಕೆ ಅವಕಾಶವಿದೆ. ನಂತರ ಎಸ್.ಡಿ.ಎಂ ಆಸ್ಪತ್ರೆಯ ಶೈತ್ಯಾಗಾರಕ್ಕೆ ರವಾನೆ ಮಾಡಲಾಗುವುದು. ಡಿ.25ರಂದು ಸಂಜೆ 5 ಗಂಟೆಯಿಂದ ಅಂತಿಮ ದರ್ಶನದ ಅವಕಾಶವಿರಲಿದೆ.

ಪ್ರೊ. ಪ್ರಭಾಕರ ಅವರ ನಿವಾಸಕ್ಕೆ ಧರ್ಮಸ್ಥಳದಿಂದ ಡಿ. ಹರ್ಷೇಂದ್ರ ಕುಮಾರ್, ಹೇಮಾವತಿ ಹೆಗ್ಗಡೆ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಪ್ರಮುಖರು, ಊರ ಪ್ರಮುಖರು ಬಂದಿದ್ದಾರೆ.

1 COMMENT

LEAVE A REPLY

Please enter your comment!
Please enter your name here