ಬಳ್ಳಮಂಜ: ಕ್ಷೇತ್ರದ ಶ್ರೀ ಈಶ್ವರ ದೇವರ ಗರ್ಭಗುಡಿಯ ಪಾದುಕನ್ಯಾಸ

0

ಬಳ್ಳಮಂಜ: ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಶಿಲಾಮಯ ಈಶ್ವರ ದೇವರ ಗರ್ಭಗೃಹ ಹಾಗೂ ತೀರ್ಥಮಂಟಪದ ನಿರ್ಮಾಣದ ಪ್ರಯುಕ್ತ ಪಾದುಕನ್ಯಾಸ ಡಿ. 21ರಂದು ಬ್ರಹ್ಮಶ್ರೀ ದೇರೆಬೈಲು ಡಾ. ಶಿವಪ್ರಸಾದ ತಂತ್ರಿಗಳ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ಅನುವಂಶಿಯ ಆಡಳಿತ ಮೊಕ್ತೇಸರ ಡಾ| ಎಂ ಹರ್ಷ ಸಂಪಿಗೆತ್ತಾಯ ಧಾರ್ಮಿಕ ವಿಧಿಗಳಲ್ಲಿ ಭಾಗಿಯಾದರು. ಶಿಲ್ಪಿಯವರಾದ ಅಶೋಕ ಕಾರ್ಕಳ, ಇಂಜಿನಿಯರ್ ಯತೀಶ್ ರೈ ಕೈಲ, ದೇವಾಲಯದ ಸಿಂಬದಿ ವರ್ಗ, ಊರಿನ ಗ್ರಾಮಸ್ಥರು ಹಾಗು ಗಣ್ಯರು ಪಾಲ್ಗೊಂಡರು.

LEAVE A REPLY

Please enter your comment!
Please enter your name here