








ಮಡಂತ್ಯಾರು: ವಲಯದ ಮಚ್ಚಿನದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ಮಹಿಳೆಯರಿಗೆ ಸ್ವಉದ್ಯೋಗದ ಬಗ್ಗೆ ರುಡ್ ಸೆಟ್ ಸಂಸ್ಥೆ ಯ ತರಬೇತಿದಾರ ಜೇಮ್ಸ್ ರವರು ಮಾಹಿತಿ ನೀಡಿದರು. ರುಡ್ ಸೆಟ್ ನಲ್ಲಿ ಮಹಿಳೆಯರಿಗೆ ಹಲವಾರು ಸ್ವ ಉದ್ಯೋಗವಿದ್ದು ಈ ಬಗ್ಗೆ ವಿವರಿಸಿದರು. ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಜಯಂತಿ ಪಾಲೆದುರವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಕುಸುಮಾವತಿ ಅವರು ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಮನ್ವಯ ಅಧಿಕಾರಿ ಸುಗುಣ ಶೆಟ್ಟಿ, ವಲಯ ಮೇಲ್ವಿಚಾರಕ ಕೇಶವ, ಸೇವಾಪ್ರತಿನಿಧಿ ನಂದಿನಿ ಹಾಗೂ ಪರಮೇಶ್ವರ್ ಅವರು ಉಪಸ್ಥಿತರಿದ್ದರು.









