ಸುದ್ದಿ ಬಿಡುಗಡೆ ಪತ್ರಿಕೆ ಬಗ್ಗೆ ಅಪಪ್ರಚಾರ-ಪತ್ರಿಕೆಯಲ್ಲಿ ಕೊಂದವರು ಯಾರು ಕಾರ್ಯಕ್ರಮದ ಬಗ್ಗೆ ವರದಿ ಬಂದಿದ್ದರೂ ಬಂದಿಲ್ಲವೆಂದು ಅಪಪ್ರಚಾರ-ದೂರು ನೀಡಲಿರುವ ಆಡಳಿತ ಮಂಡಳಿ

0

ಬೆಳ್ತಂಗಡಿ: ಬೆಳ್ತಂಗಡಿಯ ತಾಲೂಕು ಕಚೇರಿಯ ಮೈದಾನದಲ್ಲಿ ಡಿ. 16ರಂದು ನಡೆದ ಕೊಂದವರು ಯಾರು ಕಾರ್ಯಕ್ರಮದ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿ ಬಂದಿಲ್ಲ. ಆ ಪತ್ರಿಕೆಯನ್ನು ಬಾಯ್ಕಾಟ್ ಮಾಡಿ ಎಂದು ಜನತಾ ಏಜೆಂಟ್ ಎಂಬ ಯೂ ಟ್ಯೂಬ್ ವಾಹಿನಿಯವರು ವೀಡಿಯೋ ಅಪ್ ಲೋಡ್ ಮಾಡಿದ್ದಾರೆ. ಈ ಬಗ್ಗೆ ಕೆಲವು ಧ್ವನಿಗಳನ್ನು ಕೂಡ ವೀಡಿಯೋದಲ್ಲಿ ಪ್ಲೇ ಮಾಡಿ, ಸುದ್ದಿ ಬಿಡುಗಡೆ ವಿರುದ್ಧ ವ್ಯವಸ್ಥಿತ ಅಪಪ್ರಚಾರವನ್ನು ಕೈಗೊಂಡಿದ್ದಾರೆ.

ಸುದ್ದಿ ಬಿಡುಗಡೆಯ 6ನೇ ಪುಟದಲ್ಲಿದೆ ವರದಿ: ಕೊಂದವರು ಯಾರು ಕಾರ್ಯಕ್ರಮದ ವರದಿಯನ್ನು ಸುದ್ದಿ ಬಿಡುಗಡೆ ಮಾಡಿದೆ. ಜನತಾ ಏಜೆಂಟ್ ನವರು ವೀಡಿಯೋದ ಕ್ರೋಮೋ ಗ್ರಾಫಿಕ್ಸ್ (ಬ್ಯಾಕ್ ಗ್ರೌಂಡ್ )ನಲ್ಲಿ ಬಳಸಿರುವ ಪತ್ರಿಕೆಯಲ್ಲೇ ಆರನೇ ಪುಟದಲ್ಲಿ ವರದಿ ಪ್ರಕಟವಾಗಿದೆ. ಆದರೆ, ಅದೇ ಪೇಪರ್ ನಲ್ಲಿ ವರದಿ ಪ್ರಕಟವಾಗಿಲ್ಲವೆಂದು ಹೇಳಿರುವುದು ಅಪಪ್ರಚಾರವನ್ನು ಮಾಡಿದ್ದಾರೆ. ಈ ಮೂಲಕ 40 ವರ್ಷಗಳಿಂದ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ ಸುದ್ದಿಬಿಡುಗಡೆಯ ಬಗ್ಗೆ ಅಪಪ್ರಚಾರ ಮಾಡಲು ಷಡ್ಯಂತ್ರ ಮಾಡಿರುವುದು ಬಯಲಾಗಿದೆ.

ದೂರು ನೀಡಲಿರುವ ಸುದ್ದಿ ಆಡಳಿತ ಮಂಡಳಿ: ಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದರೂ ಕೂಡ ಪ್ರಕಟವಾಗಿಲ್ಲ ಎಂದು ಹೇಳಿ ಸುದ್ದಿ ಬಿಡುಗಡೆ ವಿರುದ್ಧ ವ್ಯವಸ್ಥಿತ ಷಡ್ಯಂತ್ರಗೈದು ಅಪಪ್ರಚಾರ ಮಾಡಿರುವವರ ವಿರುದ್ಧ ಪತ್ರಿಕೆಯ ಆಡಳಿತ ಮಂಡಳಿ ದೂರು ನೀಡಲಿದೆ. ಅಲ್ಲದೇ, ಇದರ ಹಿಂದಿರುವ ಕಾಣದ ಕೈ ಯಾರದ್ದು ಎಂಬುದನ್ನು ಪೊಲೀಸರು ಪತ್ತೆಹಚ್ಚಬೇಕಿದೆ. ಜನತೆಯ ಏಜೆಂಟ್ ಸುದ್ದಿಯೋ ಅಥವಾ ಅಪಪ್ರಚಾರ ಗೈಯ್ಯುವುದನ್ನೇ ಕಾಯಕವನ್ನಾಗಿಸಿಕೊಂಡಿರುವ ಇಂತವರೋ ಅನ್ನುವುದು ಗೊತ್ತಾಗಬೇಕಿದೆ.

LEAVE A REPLY

Please enter your comment!
Please enter your name here