ಕನ್ಯಾಡಿ-1: ನಿವೃತ್ತ ಶಿಕ್ಷಕ ದಿ. ವೆಂಕಪ್ಪ ಗೌಡರಿಗೆ ನುಡಿನಮನ ಕಾರ್ಯಕ್ರಮ

0

ಕನ್ಯಾಡಿ-1: ಇತ್ತೀಚೆಗೆ ನಿಧನರಾದ ಮಾಡಬೆಟ್ಟು ನಿವಾಸಿ ನಿವೃತ್ತ ಶಿಕ್ಷಕ ವೆಂಕಪ್ಪ ಗೌಡ ಅವರಿಗೆ ನುಡಿನಮನ ಕಾರ್ಯಕ್ರಮವು ಡಿ.18ರಂದು ಮಡಬೆಟ್ಟು ನಿವಾಸದಲ್ಲಿ ಜರುಗಿತು. ಡಾ| ಪ್ರದೀಷ್ ನಾವೂರು ಹಾಗೂ ಯತೀಶ್ ಕಂಗೀಲು ನುಡಿನಮನ ಸಲ್ಲಿಸಿದರು. ಮಾಜಿ ಸಚಿವ ಗಂಗಾಧರ ಗೌಡ, ಜಿ.ಪಂ. ಮಾಜಿ ಸದಸ್ಯರಾದ ರಾಜಶೇಖರ್ ಲಿಜಿ, ಶೈಲೇಶ್ ಕುಮಾರ್, ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ನಮಿತಾ ಹರೀಶ್ ಕುಮಾರ್, ಕಾಲಭೈರವೇಶ್ವರ ಒಕ್ಕಲಿಗ ಗೌಡರ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ. ಗೌಡ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ತಾ.ಪಂ. ಮಾಜಿ ಅಧ್ಯಕ್ಷ ಮುಕುಂದ ಸುವರ್ಣ, ನಡ ಗ್ರಾ.ಪಂ. ಮಾಜಿ ಅಧ್ಯಕ್ಷ ಮುನಿರಾಜ ಅಜಿ, ವಾಣಿ ಕಾಲೇಜು ಪ್ರಾಂಶುಪಾಲ ವಿಷ್ಣು ಪ್ರಕಾಶ್, ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ, ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಮೊರ್ತಾಜಿ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಎಪಿಎಂ.ಸಿ ಮಾಜಿ ಅಧ್ಯಕ್ಷ ಭರತ್ ಇಂದಬೆಟ್ಟು, ನಡ ಪಂ.ಅ.ಅಧಿಕಾರಿ ತಾರಾನಾಥ, ಕಾರ್ಯದರ್ಶಿ ಕಿರಣ್ ಕುಮಾರ್, ಸಿಬ್ಬಂದಿವರ್ಗ ಹಾಗೂ ಸದಸ್ಯರು, ನಡ ಕಾಲೇಜಿನ ಪ್ರಾಂಶುಪಾಲರು, ಗೌಡರ ಸಂಘದ ನಿರ್ದೇಶಕರು, ನಾವೂರು, ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರು, ಮನೆಯವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here