ಕಳೆಂಜ: ಸದಾಶಿವೇಶ್ವರ ದೇವಸ್ಥಾನದಲ್ಲಿ ಕಳೆದು ಹೋದ ಉಂಗುರ-ಹುಡುಕಿ ವಾರಸುದಾರರಿಗೆ ಒಪ್ಪಿಸಿದ ದೇವಸ್ಥಾನದ ಆಡಳಿತ ಮಂಡಳಿ

0

ಕಳೆಂಜ: ನಿಡ್ಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಳೆಂಜ ಶಾಖೆಯ ಪ್ರಬಂಧಕ ಕೃಷ್ಣಪ್ರಸಾದ್ ಮುಂಜಾನೆ ಇಲ್ಲಿಯ ಶ್ರೀ ಸದಾಶಿವೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದು ಈ ವೇಳೆ ತನ್ನ ಕೈಯಲ್ಲಿದ್ದ ಉಂಗುರವನ್ನು ಕಳೆದುಕೊಂಡಿದ್ದರು. ಆದರೆ ತಾನು ಎಲ್ಲಿ ಉಂಗುರವನ್ನು ಕಳೆದುಕೊಂಡಿದ್ದೇನೆ ಎಂದು ಕೃಷ್ಣಪ್ರಸಾದ್ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಿಗೆ ಕರೆ ಮಾಡಿ ದೇವಸ್ಥಾನದಲ್ಲಿ ಎಲ್ಲಾದರೂ ಉಂಗುರ ಸಿಕ್ಕಿದರೆ ತಿಳಿಸಿ ಎಂದು ಹೇಳಿದ್ದರು. ಇದರಿಂದ ಕಾರ್ಯಪ್ರವೃತ್ತರಾದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ರಾವ್ ಕಾಯಡ, ಅರ್ಚಕ ರಾಮಕೃಷ್ಣ ಭಟ್, ಸಿಬ್ಬಂದಿ ಗೀತಾ, ಉಮೇಶ್ ಶೆಟ್ಟಿ ಮುಂತಾದವರು ತೀವ್ರ ಹುಡುಕಾಟ ನಡೆಸಿದಾಗ ಉಂಗುರ ಸಿಕ್ಕಿದ್ದು ಕೂಡಲೇ ಆಡಳಿತ ಮಂಡಳಿ ಶ್ರೀಧರ್ ರಾವ್ ಕಾಯಡರವರು ಹಾಗೂ ಸ್ಥಳೀಯ ಹಾಲು ಉತ್ಪಾದಕ ಸಹಕಾರಿ ಸಂಘದ ಸದಸ್ಯ ರತ್ನಾಕರ ಗೌಡ, ಕಳೆಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ತೆರಳಿ ಹಿಂತಿರುಗಿಸಿರುತ್ತಾರೆ. ಈ ವೇಳೆ ಆಡಳಿತ ಮಂಡಳಿ ಅರ್ಚಕರು ಮತ್ತು ಸಿಬ್ಬಂದಿ ವರ್ಗದ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here