






ಮಡಂತ್ಯಾರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅವರ ನಿರ್ದೇಶನದಡಿಯಲ್ಲಿ, ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ನೇತೃತ್ವದಲ್ಲಿ ಡಿ. 20 ಮತ್ತು 21ರಂದು ಮಡಂತ್ಯಾರು “ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸ್ಥಳೀಯ 26ನೇ ಸಾಲಿನ ರೋವರ್ಸ್ ರೇಂಜರ್ಸ್ ( 2025- 26)2025 ಸಮಾಗಮ, ಸ್ಕೌಟ್ಸ್ – ಗೈಡ್ಸ್ ಮೇಳ ಮತ್ತು ಕಬ್- ಬುಲ್ ಬುಲ್ಸ್ ಉತ್ಸವ ನಡೆಯಲಿದೆ.
ಈ ಕ್ಯಾಂಪೋರಿಯಲ್ಲಿ ಧ್ವಜಾರೋಹಣ, ಧ್ವಜ ಸ್ಥಂಭ ರಚನೆ, ಸುಧಾರಿತ ಗುಡಾರ ರಚನೆ, ಗ್ಯಾಪ್ಟಟ್ ತಯಾರಿ, ಬೆಂಕಿ ಬಳಸದೆ ಅಡುಗೆ ತಯಾರಿ, ಕರಕುಶಲ ವಸ್ತುಗಳ ತಯಾರಿ. ಗ್ರೀಟಿಂಗ್ ಕಾರ್ಡ್ ತಯಾರಿ, 2026 ನೇ ಸಾಲಿನ ಕ್ಯಾಲೆಂಡರ್ ತಯಾರಿ, ಗಾಳಿಪಟ ತಯಾರಿ, ಕಬ್ ವಂದನೆ, ಬುಲ್ ಬುಲ್ಸ್ ರಿಂಗ್, ಪೇಪರ್ ಕ್ರಾಪ್ಸ್, ಧಾನ್ಯದಿಂದ ಆಕೃತಿ ತಯಾರಿ, ಚಿತ್ರ ರಚನೆ, ಮುಂತಾದ ವಿವಿಧ ಕೌಶಲ್ಯ ಚಟುವಟಿಕೆಗಳು, ಸಾಹಸಮಯ ಚಟುವಟಿಕೆಗಳು, ಬೈಂಡ್ ಗೇಮ್. ಪಥಸಂಚಲನ. ನಗರ ಮೆರವಣಿಗೆ, ಶಿಬಿರಾಗ್ನಿ. ಸರ್ವಧರ್ಮ ಪ್ರಾರ್ಥನೆ, ಹೊರ ಸಂಚಾರ. ಈ ರೀತಿ ಹತ್ತು ಹಲವಾರು ಕಾರ್ಯಕ್ರಮಗಳು ನಡೆಯಲಿವೆ.


ಈ ಕಾರ್ಯಕ್ರಮಗಳಲ್ಲಿ ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜ, ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ಸ್ -ಗೈಡ್ ಮುಖ್ಯ ಆಯುಕ್ತ ಡಾಕ್ಟರ್ ಎಂ. ಮೋಹನ ಆಳ್ವ, ಶ್ರೀ ಕ್ಷೇತ್ರ ಬಳ್ಳಮಂಜದ ಆಡಳಿತ ಮೊಕ್ತೇಸರ ಡಾ. ಹರ್ಷ ಸಂಪಿಗೆತ್ತಾಯ, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಮಡಂತ್ಯಾರಿನ ಉದ್ಯಮಿ ಪ್ರಶಾಂತ ಶೆಟ್ಟಿ, ಮಡಂತ್ಯಾರು ಗ್ರಾಮ ಪಂಚಾಯತಿಯ ಅಧ್ಯಕ್ಷೆ ರೂಪಾ ನವೀನ್ ಕೊಡ್ಲಕ್ಕೆ, ಮಾಲಾಡಿ ಗ್ರಾಮ ಪಂಚಾಯತ್ನ ಅಧ್ಯಕ್ಷ ಪುನೀತ್ ಕುಮಾರ್, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಸ್ವಾಮಿ ದೀಪಕ್ ಲಿಯೋ ಡೇಸಾ, ಮಡಂತ್ಯಾರು ರೋಟರಿ ಕ್ಲಬ್ನ ಅಧ್ಯಕ್ಷ ಮೆಕ್ಸಿಂ ಆಲ್ಬುಕರ್ಕ್, ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ, ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೋಯಲ್ ಮೆಂಡೋನ್ಸಾ, ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲ ಅಲೆಕ್ಸ್ ಐವನ್ ಸಿಲ್ವೇರಾ, ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೂರಜ್ ಚಾರ್ಲ್ಸ್ ನ್ಯೂನಸ್, ಸ್ಕೌಟ್ಸ್ ವಿಭಾಗದ ಜಿಲ್ಲಾ ಆಯುಕ್ತ ಬಿ. ಮಹಮ್ಮದ್ ತುಂಬೆ, ಶ್ರೀ ಕ್ಷೇತ್ರ ಪಾರೆಂಕಿಯ ಪ್ರಧಾನ ಅರ್ಚಕ ಟಿ.ವಿ. ಶ್ರೀಧರರಾವ್ ಪೇಜಾವರ, ಸ್ಕೌಟ್ಸ್ ವಿಭಾಗದ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್, ಸೇಕ್ರೆಡ್ ಹಾರ್ಟ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೆರಾಲ್ಡ್ ಮೋರಾಸ್, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ರವೀಂದ್ರ ರೈ, ಮಡಂತ್ಯಾರು ಗ್ರಾಮ ಪಂಚಾಯಿತಿನ ಉಪಾಧ್ಯಕ್ಷ ಗೋಪಾಲಕೃಷ್ಣ, ಬೆಳ್ತಂಗಡಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ಭಾರತೀಯ ಜೀವ ವಿಮ ನಿಗಮದ ಚೀಪ್ ಎಕ್ಸೆಸರ್ ಹರೀಶ್ ಶೆಟ್ಟಿ, ಪುಂಜಾಲಕಟ್ಟೆ ಪೊಲೀಸ್ ಉಪನಿರೀಕ್ಷಕ ರಾಜೇಶ್ ಕೆ.ವಿ., ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಸಹಾಯಕ ಧರ್ಮ ಗುರು ಸ್ವಾಮಿ ಲ್ಯಾರಿ ಪಿಂಟೋ, ಮಡಂತ್ಯಾರು ಸ್ಕೌಟ್ಸ್- ಗೈಡ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ಮೇದಿನಿ ಡಿ. ಗೌಡ, ಮಡಂತ್ಯಾರು ಸ್ಕೌಟ್ಸ್- ಗೈಡ್ ಸ್ಥಳೀಯ ಸಂಸ್ಥೆಯ ಮಹಾ ಪೋಷಕರಾದ ಗೀತಾ ಹೆಬ್ಬಾರ್, ಸೈಟ್ಸ್ ವಿಭಾಗದ ಏ.ಡಿ.ಸಿ. ಜೆರಾಲ್ಡ್ ಫರ್ನಾಂಡಿಸ್, ನಿವೃತ್ತ ಶಿಕ್ಷಕಿ ಸುಧಾ ಎಸ್. ಭಟ್, ಸ್ಕೌಟ್ಸ್ -ಗೈಡ್ ಸ್ಥಳೀಯ ಸಂಸ್ಥೆಯ ಮಹಾಪೋಷಕರಾದ ಕೃಷ್ಣ ನಾಯಕ್ ಮತ್ತು ವಿಷ್ಣುದಾಸ್ ಬಾಳಿಗ ಹಾಗೂ ಅನಿಲ್ ಅಧಿಕಾರಿ,
ಮಡಂತ್ಯಾರು ಮತ್ತು ಪುಂಜಾಲಕಟ್ಟೆಯ ವರ್ತಕರ ಸಂಘದ ಅಧ್ಯಕ್ಷ ಬಿ. ಜಯಂತ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ದತ್ತಾತ್ರೇಯ ಗೊಲ್ಲ, ಮಡಂತ್ಯಾರು ಕಥೋಲಿಕ್ ಸಭಾದ ನಿಕಟ ಪೂರ್ವ ಅಧ್ಯಕ್ಷೆ ಸೆಲೆಸ್ತೀನ್ ಡಿಸೋಜಾ, ಮಾಲಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ. ರಾಜಶೇಖರ ರೈ, ಮಡಂತ್ಯಾರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗ ಶ್ರೀನಿವಾಸ ಡಿ.ಪಿ. ಮಚ್ಚಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರಿಶಂಕರ, ಜಿಲ್ಲಾ ಸೌಟ್ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಪ್ರತೀಮ್ ಕುಮಾರ್ ಕೆ., ಪುಂಜಾಲಕಟ್ಟೆಯ ಸಮೂಹ ಸಂಪನ್ಮೂಲ ವ್ಯಕ್ತಿ ಚೇತನ, ಮಡಂತ್ಯಾರು ಸ್ಕೌಟ್ಸ್ – ಗೈಡ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ರುಕ್ಕಿಣಿ, ಮಡಂತ್ಯಾರು ಗಾರ್ಡಿಯನ್ ಏಂಜಲ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಹೆಲೆನ್ ಮೋನಿಕಾ ಲೋಬೋ, ಜಿಲ್ಲಾ ಗೈಡ್ ಆಯುಕ್ತರಾದ ವಿಮಲ ರಂಗಯ್ಯ, ಜಿಲ್ಲಾ ಸ್ಕೌಟ್ಸ್- ಗೈಡ್ ಸಂಸ್ಥೆಯ ಕೋಶಾಧಿಕಾರಿ ನವೀನ ಚಂದ್ರ, ಸ್ಕೌಟ್ಸ್ ವಿಭಾಗದ ಜಿಲ್ಲಾ ಸಂಘಟನಾ ಆಯುಕ್ತ ವಸಂತ ಕೆ., ಗೈಡ್ ವಿಭಾಗದ ಜಿಲ್ಲಾ ಸಂಘಟನಾ ಆಯುಕ್ತರಾದ ಸುನಿತಾ, ಹಾಗೂ ಮಡಂತ್ಯಾರ್ ಸ್ಕೌಟ್ಸ್- ಗೈಡ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ಸೋಮನಾಥ ನಾಯಕ್, ಸ್ಕೌಟ್ಸ್- ಗೈಡ್ ಸ್ಥಳೀಯ ಸಂಸ್ಥೆಯ ಮಹಾಪೋಷಕರಾದ ನಿತ್ಯಾನಂದ ಬಿ. ಎಂ., ಮೋನಪ್ಪ ಪೂಜಾರಿ, ಪ್ರವೀಣ್ ಕುಮಾರ್ ತೋಟ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಆರತಿ, ವಾರಿಜ, ರಾಜೇಶ್, ಮೊಹಮ್ಮದ್ ಶರೀಫ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸ್ಕೌಟ್ಸ್- ಗೈಡ್ ಮಡಂತ್ಯಾರು ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ರವರು ಮತ್ತು ರ್ಯಾಲಿ ನಿರ್ದೇಶಕ ಚಿದಾನಂದರವರು ಪತ್ರಿಕ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.









