




ಉಜಿರೆ: ಕಾಲೇಜು ರಸ್ತೆ ಶಾರ್ವರಿ ಕಾಂಪ್ಲೆಕ್ಸ್ ನಲ್ಲಿ ಮಹಾವೀರ ಸಿಲ್ಕ್ ಬಳಿ ರಮ್ಯ 1ಗ್ರಾಂ ಗೋಲ್ಡ್, ಫ್ಯಾನ್ಸಿ, ಮತ್ತು ಫೂಟ್ ವೇರ್ ನೂತನ ಶೋ ರೂಂ ನ. 28ರಂದು ಶುಭಾರಂಭ ಗೊಂಡಿತು. ನೂತನ ಸಂಸ್ಥೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡುವೆಟ್ನಾಯ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.



ಮುಖ್ಯ ಅತಿಥಿಗಳಾಗಿ ಉಜಿರೆ ಲಕ್ಹ್ಮೀ ಇಂಡಸ್ಟ್ರಿಸ್ ಕನಸಿನ ಮನೆ ಕೆ. ಮೋಹನ್ ಕುಮಾರ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಕುಮಾರ್ ಬರಮೇಲು, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಉಜಿರೆ ಮೂಹಿಯ್ಯುದ್ದೀನ್ ಜುಮ್ಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್, ಉಜಿರೆ ರುಡ್ ಸೆಟ್ ಸಂಸ್ಥೆ ಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್, ಉದ್ಯಮಿ ಪ್ರವೀಣ್ ಫೆರ್ನಾಂಡಿಸ್ ಹಳ್ಳಿಮನೆ, ಸೌತಡ್ಕ ನೈಮಿಷ ವೆಂಚರ್ಸ್ ಉದ್ಯಮಿ ಬಾಲಕೃಷ್ಣ, ಉಜಿರೆ ಗಣೇಶ್ ಆಯಿಲ್ ಮಿಲ್ ಮಾಲಾಕ ನಾಗರಾಜ್ ಕಾಮತ್, ತೋಟ ತ್ತಾಡಿ ಎಸ್ ಎನ್ ಡಿ ಪಿ ಅಧ್ಯಕ್ಷ ಸುರೇಶ್ ಎಂ. ಎನ್., ಹಿರಿಯರಾದ ವಾಸು ಪೂಜಾರಿ ಮರ್ವದಡಿ ಎನ್ನಿತರ ಗಣ್ಯರು ಹಿತೈಷಿಗಳು, ಗ್ರಾಹಕರು, ಕುಟುಂಬ ವರ್ಗದವರು ಹಾಜರಿದ್ದು ಶುಭ ಹಾರೈಸಿದರು.
ಮಾಲಕರಾದ ಬಿಚಿತ್ರಾ ಮತ್ತು ಪ್ರಸಾದ್ ಬಿ.ಎಸ್. ಗಣ್ಯರನ್ನು ಸ್ವಾಗತಿಸಿ, ಗೌರವಿಸಿದರು. ಸಿಬ್ಬಂದಿಗಳು ಸಹಕರಿಸಿದರು. ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿ, ಪ್ರಸಾದ್ ಬಿ. ಎಸ್. ವಂದಿಸಿದರು.









