




ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗದಿಂದ ನ.20ರಂದು “ಪೌಷ್ಟಿಕ ಆಹಾರ & ಆರೋಗ್ಯ ” ಕಾರ್ಯಕ್ರಮ ಲಾಯಿಲ ಕರ್ನೋಡಿ ದ. ಕ. ಜಿ. ಪಂ. ಉ. ಹಿರಿಯ ಪ್ರಾಥಮಿಕ ಶಾಲೆ ನಡೆಸಲಾಯಿತು.
ಕರ್ನೋಡಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಲೀನಾ ಡಿಸೋಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕರ್ನೋಡಿ ಶಾಲೆಯ ಪ್ರೌಢ ಶಾಲಾ ಸಹ ಶಿಕ್ಷಕ ಕೃಷ್ಣಕುಮಾರ್ ವಹಿಸಿದ್ದರು.


ಸಂಪನ್ಮೂಲ ವ್ಯಕ್ತಿ ಡಾ.ಭಾಷಿಣಿ ಅವರು “ಆಹಾರ ಮತ್ತು ಪೌಷ್ಟಿಕತೆ ಆರೋಗ್ಯಕರ ಜೀವನದ ಮೂಲಧಾರ. ಸರಿಯಾದ ಪ್ರಮಾಣದ ಪೌಷ್ಟಿಕಾಂಶ ಹೊಂದಿರುವ ಆಹಾರವನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ವೃದ್ಧಿಸಬಹುದು. ಜೊತೆಗೆ ಯೋಗಭ್ಯಾಸದ ಬಗ್ಗೆಯೂ ಮಾಹಿತಿ ನೀಡಿದರು.
ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ಅಖಿಲೇಶ್, ಬಿಂದು ಬಿ.ಆರ್., ಸ್ಮೃತಿ ಆರ್., ಹರ್ಷಿತಾ ಕೆ.ಎಸ್. ಅವರು ಕಾರ್ಯಕ್ರಮವನ್ನು ಆಯೋಜಿಸಿದರು.









