




ನಾರಾವಿ: ಡಾ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಕುತ್ಲೂರು ಮಹರ್ಷಿ ವಾಲ್ಮೀಕಿ ವಸತಿ ಶಾಲೆಯ 140 ವಿದ್ಯಾರ್ಥಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಮತ್ತು ಶೌರ್ಯ ವಿಪತ್ತು ಘಟಕದ ಸದಸ್ಯರು ಹಣ್ಣು ಹಂಪಲು ವಿತರಿಸಿದರು.



ವಲಯದ ಎಲ್ಲಾ ಕಾರ್ಯಕರ್ತರು, ವಿಪತ್ತು ಘಟಕದ ಸಂಯೋಜಕರು, ಪ್ರತಿನಿಧಿ ಸರ್ವಸದಸ್ಯರು, ಕುತ್ಲೂರು A ಒಕ್ಕೂಟದ ಅಧ್ಯಕ್ಷರು, ಮಹರ್ಷಿ ವಾಲ್ಮೀಕಿ ವಸತಿ ಶಾಲೆಯ ಮುಖ್ಯೋಪಾದ್ಯಾಯರು ಮತ್ತು ಸಹಶಿಕ್ಷಕರು ಉಪಸ್ಥಿತರಿದ್ದರು.









