ಬೆಳ್ತಂಗಡಿ: ಟೀಂ ಅಭಯಹಸ್ತದಿಂದ ಕುದ್ಯಾಡಿ ಸರ್ಕಾರಿ ಶಾಲೆಗೆ ಪ್ರಿಂಟರ್ ಖರೀದಿಗೆ ಆರ್ಥಿಕ ಸಹಕಾರ

0

ಬೆಳ್ತಂಗಡಿ: ಸೇವೆ ಸಂಘಟನೆ ಸಾಮರಸ್ಯದ ಧ್ಯೇಯದೊಂದಿಗೆ ಕಳೆದ ಒಂಭತ್ತು ವರ್ಷಗಳಿಂದ ಸಮಾಜಮುಖಿ ಸೇವಾಕಾರ್ಯಗಳಲ್ಲಿ ತೊಡಗಿರುವ ಸಂದೀಪ್ ಸುಂದರ್ ನೀರಲ್ಕೆರವರ ಸಾರಥ್ಯದ ಟೀಂ ಅಭಯಹಸ್ತ ಚ್ಯಾರಿಟೇಬಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ ವತಿಯಿಂದ ಕುದ್ಯಾಡಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಅಗತ್ಯವಿರುವ ಪ್ರಿಂಟರ್ ಖರೀದಿಗೆ ಆರ್ಥಿಕ ಸಹಕಾರವನ್ನು ಹಸ್ತಾಂತರ ಮಾಡಲಾಯಿತು.

ಸಂಘಟನೆಯ ಸಲಹೆಗಾರರಾದ ಸದಾಶಿವ ಶೆಟ್ಟಿ ಹೊಸಮನೆ ಅರುವ ಅವರು ಹಸ್ತಾಂತರಿಸಿದರು. ಶಾಲೆಯ ಪ್ರಗತಿಗೆ ಅಹರ್ನಿಶಿ ಶ್ರಮಿಸುತ್ತಿರುವ ಶಿಕ್ಷಕ ನಾಗಭೂಷಣ್ ಅವರನ್ನು ಅಳದಂಗಡಿ ಸತ್ಯದೇವತಾ ಕಲಾ ತಂಡದ ಪೂರ್ವಾಧ್ಯಕ್ಷ ಸುಂದರ ಪೂಜಾರಿ ನೀರಲ್ಕೆ ಅವರು ಅಭಿನಂದಿಸಿದರು. ಸದಸ್ಯರಾದ ಮನೀತ್ ಅರ್ವ, ಅಭಿಷೇಕ್ ಎನ್., ಶ್ರೀನಾಥ್ ಶೆಟ್ಟಿ, ಇರ್ಷಾದ್ ಶಿರ್ಲಾಲು ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here