ನೆಲ್ಯಾಡಿ: ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ನೂತನ ಧರ್ಮಾಧ್ಯಕ್ಷರಿಗೆ ಭವ್ಯ ಸ್ವಾಗತ

0

ನೆಲ್ಯಾಡಿ: ಪವಿತ್ರ ಸಂತ ಅಲ್ಫೋನ್ಸ ಕ್ಷೇತ್ರದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಭಿಷೇಕಗೊಂಡ ಬಿಷಪ್ ಜೇಮ್ಸ್ ಪಟ್ಟೆರಿಲ್ ಸಿ.ಎಂ.ಎಫ್. ಅವರಿಗೆ ಭವ್ಯ ಸ್ವಾಗತವನ್ನು ಕೋರಲಾಯಿತು. ನ.22ರಂದು ನಡೆದ ಕಾರ್ಯಕ್ರಮದಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಸರ್ವ ಸದಸ್ಯರು ಹಾಗೂ ನಾಡಿನ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಸಮರ್ಪಸಿ ಬರಲ್ಲ ಮಾಡಿ ಕೊಳ್ಳಲಾಯಿತು.

ನಾಡಿನ ಅಭಿವೃದ್ಧಿಗೆ ಐಕ್ಯಮತದ ಪ್ರಯತ್ನ ಅಗತ್ಯ ಹಾಗೂ ಸರ್ವ ಸಮಾಜದ ಜೊತೆ ಸೇರಿ ನಾಡಿನ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಮ್ಮ ಸಂದೇಶ ದಲ್ಲಿ ತಿಳಿಸಿದರು. ಚರ್ಚ್ ನ ಧರ್ಮ ಗುರು ಫಾದರ್. ಶಾಜಿ ಮಾತ್ಯು, ಫಾ. ಅಲೆಕ್ಸ್, ರೇಜಿಯನಲ್ ಸುಪಿರಿಯರ್, ಸಿಸ್ಟೆರ್ ಲಿಸ್ ಮಾತ್ಯು ಎಸ್. ಎಚ್., ಟ್ರಸ್ಟಿಗಳಾದ ಜೋನ್ಸನ್ ಪುಳಿಕ್ಕಲ್, ರಾಜೇಶ್ ತೆಕ್ಕಿನಾಟ್ಟು, ರೆಜಿ ಕೊಳಂಗರಾತ್, ಜೋಯ್ ಪುತ್ತೆನ್ಪರಂಭಿಲ್, ಸಂಯೋಜಕರಾಗಿ ಜೋರ್ಜ್ ಕುಟ್ಟಿ ಆಯಾಮ್ ಕುಡಿ ಮೊದಲಾದವರು ನೇತೃತ್ವ ವಹಿಸಿದ್ದರು.

LEAVE A REPLY

Please enter your comment!
Please enter your name here