




ತಣ್ಣೀರುಪಂತ: ಗ್ರಾಮ ಪಂಚಾಯತ್ ಮಟ್ಟದ ಸುಗಮ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆಯನ್ನು ಗ್ರಾಮ ಪಂಚಾಯತಿನ ಬಳಿ ಬಾಪೂಜಿ ಸಭಾಭವನದಲ್ಲಿ ನ. 18ರಂದು ನಡೆಸಲಾಯಿತು. ಪ್ರಾರ್ಥನೆಯೊಂದಿಗೆ ಆರಂಭಗೊಂಡು, ಕೃಷಿ ಸಖಿ ಶೋಭಾ ಅವರು ಎಲ್ಲ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿ ಸ್ವಾಗತಿಸಿದರು. ಒಕ್ಕೂಟದ ಅಧ್ಯಕ್ಷೆ ಸವಿತಾ, ಗ್ರಾಮ ಪಂಚಾಯತಿನ ಅಧ್ಯಕ್ಷೆ ಹೇಮಾವತಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮಯ್ಯ, ಕಾರ್ಯದರ್ಶಿ ಆನಂದ, ಉಪಾಧ್ಯಕ್ಷೆ ಪ್ರಿಯ, ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಹಾಗೂ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು ಸಭಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

MBK ಸೌಮ್ಯಶ್ರೀ ಅವರು 2024 -25ನೇ ಸಾಲಿನ ವಾರ್ಷಿಕ ವರದಿ ಮತ್ತು ಜಮಾ ಖರ್ಚು ವಿವರವನ್ನು ಮಂಡಿಸಿದರು. ಅನುಮೋದನೆಯನ್ನು ಸಭೆಯಿಂದ ಸಂಜೀವಿನಿ ಚಪ್ಪಾಳೆಯ ಮೂಲಕ ಪಡೆಯಲಾಯಿತು. ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಸಂಜೀವಿನಿ ಸಂಘಗಳ ಕುರಿತು ಮಾತಾಡಿ ಶುಭ ಹಾರೈಸಿದರು. ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಮಮತಾ ಅವರನ್ನು ಆಯ್ಕೆ ಮಾಡಲಾಯಿತು. ಹಾಗೆಯೇ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಜೀವಿನಿ ಒಕ್ಕೂಟಕ್ಕೆ ಸಹಕಾರವನ್ನು ನೀಡುತ್ತಿದ್ದ ಗ್ರಾಮ ಪಂಚಾಯತಿನ ಸಿಬ್ಬಂದಿ ಸುಂದರ ನಾಯ್ಕ ಮತ್ತು ಕಾರ್ಯದರ್ಶಿ ಆನಂದ ಅವರನ್ನು ಗೌರವಿಸಲಾಯಿತು. LCRP ಸಂಧ್ಯಾ ಅವರ ಧನ್ಯವಾದದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.









