









ಬೆಳ್ತಂಗಡಿ; ನೆರಿಯ ಗ್ರಾಹಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ. ರಾಮಕುಮಾರ್ ಬಯಲು ನೆರಿಯ ಮತ್ತು ಉಪಾಧ್ಯಕ್ಷರಾಗಿ ಹೇಮಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕರಾಗಿ ಪಿ.ಜಿ. ನಾರಾಯಣ, ಬಿ. ಧರ್ಣಪ್ಪ ಗೌಡ, ಪಿ.ಕೆ. ರಾಜನ್, ರಾಮಕೃಷ್ಣ ಗೌಡ ಕೆ, ಕೆ.ವಿ. ಜೋರ್ಜ್, ಗಣೇಶ ಕೆ.ಎಸ್, ಶಾಂತಮ್ಮ, ಬೊಮ್ಮಣ್ಣ, ಭವಾನಿ, ಬಿ. ಆಶ್ರಫ್ ನೆರಿಯ ಮತ್ತು ಕಮಲಾಕ್ಷ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಿಟನಿಂಗ್ ಅಧಿಕಾರಿಯಾಗಿ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಬಿ.ವಿ ಪ್ರತಿಮಾ ಕಾರ್ಯ ನಿರ್ವಹಿಸಿದ್ದರು.









