ವೇಣೂರು: ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ.ವೇಣೂರು ಶಾಖೆಯಲ್ಲಿರುವ ಅಷ್ಟಮಿ ನವೋದಯ ಸ್ವಸಹಾಯ ಸಂಘದ ಸದಸ್ಯರಾದ ರಂಜಿತ್, ಭ್ರಮರಾಂಭ ನವೋದಯ ಸ್ವಸಹಾಯ ಸಂಘದ ಸದಸ್ಯೆ ವಿಶಾಲ, ಕಾವ್ಯಶ್ರೀ ನವೋದಯ ಸ್ವಸಹಾಯ ಸಂಘದ ಸದಸ್ಯೆ ಸೌಮ್ಯ, ಶ್ರೀದೀಪಾ ನವೋದಯ ಸಂಘದ ಸದಸ್ಯೆ ಸುಮಲತಾ ಅವರಿಗೆ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರಿನಿಂದ ಮಂಜೂರಾದ ಚೈತನ್ಯ ವಿಮಾ ಒಟ್ಟು ಮೊತ್ತ ರೂ.28442/ ಚೆಕ್ ನ್ನು ಶಾಖೆಯ ಶಾಖಾ ವ್ಯವಸ್ಥಾಪಕ ನಿತೀಶ್ ಹೆಚ್. ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಪ್ರೇರಕಿ ಆಶಾಲತಾ ಹಾಗೂ ಶಾಖಾ ಸಿಬ್ಬಂದಿಗಳಾದ ನೀತಾ, ಅಜಿತ್, ಭಾರತಿ ಉಪಸ್ಥಿತರಿದ್ದರು.