ಬೆಳ್ತಂಗಡಿ: ವಾಣಿ ಶಿಕ್ಷಣ ಸಂಸ್ಥೆಯಲ್ಲಿ ವಾಣಿ ವಿದ್ಯಾ ಸಮ್ಮಾನ್ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಅ.7ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡ ಉದ್ಘಾಟಿಸಿ ಮಾತನಾಡಿ ಸರ್ವಪಲ್ಲಿ ರಾಧಕೃಷ್ಣ ಅವರ ಜನಮ ದಿನವಾದ ಸೆ.5ರಂದು ಶಿಕ್ಷಕರ ದಿನಾಚಾರಣೆ ಆಚರಿಸಬೇಕು, ಆದರೆ ಪ್ರಸ್ತುತ ದಿನಗಳಲ್ಲಿ ಈ ಆಚರಣೆ ಬೇರೆ ದಿನಗಳಲ್ಲಿ ಆಗುತ್ತಿದ್ದು ಯಾವ ದಿನ ಶಿಕ್ಷಕರ ದಿನ ಎಂದು ನಿಗದಿಯಾಗಿದೆಯೋ ಅಂದೇ ಆಚರಣೆ ಮಾಡಿ ಪಾಲನೆಯಾಗಬೇಕು. ಈ ಬಗ್ಗೆ ಆದೇಶ ಹೊರಡಿಸುವಂತೆ ಸರಕಾರದ ಗಮನಕ್ಕೆ ತರುವುದಾಗಿ ಹೇಳಿದರು.
ರಾಜ್ಯ ಮಟ್ಟದಲ್ಲಿ ಗುರುತಿಸುವಂತದು ಅಷ್ಟು ಸುಲಭದ ವಿಚಾರವಲ್ಲ. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ವಿದ್ಯಾವಂತರಾಗಬೇಕು ಎಂದು ಅನೇಕ ಶಿಕ್ಷಣ ಸಂಸ್ಥೆಗಳು ಆರಂಭವಾದವು ಆದರೆ ವಾಣಿ ಶಿಕ್ಷಣ ಸಂಸ್ಥೆಯ ಆರಂಭ ಕಲ್ಲು ಮುಳ್ಳಿನಲ್ಲಿ ಸಾಗಿ ಇಂದು ಸಾರ್ಥಕವಾಗಿದೆ ಎಂದರು.
ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷತೆ ವಹಿಸಿದರು. ನಾವೂರು ಆರೋಗ್ಯ ಕ್ಲಿನಿಕ್‌ನ ಡಾ. ಪ್ರದೀಪ್ ದಿಕ್ಕೂಚಿ ಭಾಷಣ ಮಾಡಿ ಸಮುದಾಯ ಹಾಗೂ ಸಮಾಜಕ್ಕೆ ಏನು ಮಾಡಬಹುದೆಂದು ತೋರಿಸಿಕೊಟ್ಟ ವಾಣಿ ವಿದ್ಯಾಸಂಸ್ಥೆ ಸಾಮಾಜಿಕ ಕಳಕಳಿಗೆ ಕಾರಣವಾಗಿದೆ. ಈ ಶಿಕ್ಷಣ ಸಂಸ್ಥೆಯಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಯಾನಂದ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ವಾಣಿ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಹೆಚ್ ಪದ್ಮ ಗೌಡ, ವಾಣಿ ಶಿಕ್ಷಣ ಸಂಸ್ಥೆಗಳ ಮಾಜಿ ಅಧ್ಯಕ್ಷ ಜಿ. ಸೋಮೇಗೌಡ, ವಾಣಿ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ಭಾಗವಹಿಸಿದರು.

ಈ ವೇಳೆ ಕೊಕ್ರಾಡಿ ಪ್ರಭಾರ ಮುಖ್ಯ ಶಿಕ್ಷಕ ಮಹಮ್ಮದ್ ರಿಯಾಜ್, ಗುರುವಾಯನಕೆರೆ ಸ. ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಜಗನ್ನಾತ್ ಕುಲಾಲ್, ಮುಂಡಾಜೆ ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ಜಯಂತಿ ಟಿ., ಬೆಳ್ತಂಗಡಿ ಸ. ಪ್ರೌಢ ಶಾಲೆ ಸಹ ಶಿಕ್ಷಕ ಸುರೇಶ್ ಶೆಟ್ಟಿ, ಕಾಯರ್ತಡ್ಕ ಸ. ಪ್ರೌಢ ಶಾಲೆ ಸಹ ಶಿಕ್ಷಕಿ ವಾಣಿ, ಬೆಂದ್ರಾಳ ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆ ಸಹ ಶಿಕ್ಷಕ ವಸಂತ ಅವರಿಗೆ ವಾಣಿ ವಿದ್ಯಾ ಸಮ್ಮಾನ್ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಸಂಘದಿಂದ ಶಾಸಕ ಎಸ್.ಎಲ್. ಭೋಜೇಗೌಡ ಅವರನ್ನು ಸನ್ಮಾನಿಸಲಾಯಿತು.
ಜೊತೆಕಾರ್ಯದರ್ಶಿ ಶ್ರೀನಾಥ್ ಕೆ.ಎಂ., ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ಉಪಾಧ್ಯಕ್ಷ ಧರ್ಣಪ್ಪ ಗೌಡ, ಕೋಶಾಧಿಕಾರಿ ಯುವರಾಜ್ ಅನಾರು, ಯುವ ಗೌಡರ ಸಂಘದ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ವಾಣಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಹಾಸಿನಿ, ಆಡಳಿತಾಧಿಕಾರಿ ಪ್ರಸಾದ್, ಮಾಜಿ ಕಾರ್ಯದರ್ಶಿ ಮೋಹನ ಗೌಡ, ಮಹಿಳಾ ವೇದಿಕೆಯ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ನಿರ್ದೇಶಕರಾದ ಗೋಪಾಲಕೃಷ್ಣ ನ್ಯಾಯವಾದಿ, ವಿಜಯ ಗೌಡ ನ್ಯಾಯತರ್ಪು, ದಿನೇಶ್ ಗೌಡ ಕೊಯ್ಯೂರು, ಮಾಧವ ಗೌಡ, ವಸಂತ ಗೌಡ, ಪ್ರಸನ್ನ ಬಾರ್ಯ, ಡಿ.ಎಂ. ಗೌಡ, ಉಷಾದೇವಿ ವೆಂಕಟ್ರಮಣ ಗೌಡ, ಮುಖ್ಯೋಪಾಧ್ಯಾಯಿನಿ ಸುಹಾಸಿನಿ ಹಾಗೂ ವಾಣಿ ಆಂಗ್ಲ ಮಾಧ್ಯಮ ಹಾಗೂ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು, ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ವಾಣಿ ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಸ್ವಾಗತಿಸಿದರು. ಅನುರಾಧ ಕೆ. ರಾವ್. ಮತ್ತು ಬೆಳಿಯಪ್ಪ ಕೆ. ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಾಯ ಲಕ್ಷ್ಮೀನಾರಾಯಣ ಕೆ. ಧನ್ಯವಾದವಿತ್ತರು.