ಉಜಿರೆ: ರೋಟರಿ ಕ್ಲಬ್ ಬೆಳ್ತಂಗಡಿ, ವ್ಯಾಯಾಮ್ ಮಲ್ಟಿ ಜಿಮ್ ಉಜಿರೆ, ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ ವತಿಯಿಂದ ಅ. 1ರಂದು ವ್ಯಾಯಾಮ್ ಜಿಮ್ ನಲ್ಲಿ ನಡೆದ ಆಯುಧ ಪೂಜಾ ಸಂದರ್ಭದಲ್ಲಿ ಸಂಘಟನೆ ವತಿಯಿಂದ ಪ್ರತಿಭಾವಂತ ಬಡ ಇಂಜಿನಿಯರ್ ವಿದ್ಯಾರ್ಥಿ ಅಭಿಜಿತ್ ಅವರಿಗೆ ಲ್ಯಾಪ್ ಟಪ್ ಮತ್ತು ಗುರುದೇವ ಪದವಿ ಪೂರ್ವ ಕಾಲೇಜು ಬಡ ವಿದ್ಯಾರ್ಥಿನಿ ಐಶ್ವರ್ಯ ಇವರಿಗೆ ರೂ. 25 ಸಾವಿರ ಧನಸಹಾಯ ವಿತರಿಸಿದರು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಪ್ರವೀಣ್ ಗೋರೆ, ರೋಟರಿ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ನಿಯೋಜಿತ ಅಧ್ಯಕ್ಷ ಶ್ರೀಧರ್ ಕೆ. ವಿ. ನಿಕಟ ಪೂರ್ವ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು, ಆದರ್ಶ ಕಾರಂತ್, ವ್ಯಾಮಯ್ ಮಲ್ಟಿ ಜಿಮ್ ಮಾಲಕ ಶಿಶಿರ್ ರಘುಚಂದ್ರ, ರಘುಚಂದ್ರ ಟಿ. ಜಿ., ಉಷಾ ರಘುಚಂದ್ರ, ಚಿರಂಜೀವಿ ಯುವಕ ಮಂಡಲದ ಅಧ್ಯಕ್ಷ ಜನಾರ್ದನ, ಸದಸ್ಯ ಜಯರಾಜ್, ಬೆಳ್ತಂಗಡಿ ಶ್ರೀ ಗುರುದೇವ ಪ. ಪೂ. ಕಾಲೇಜು ಉಪ ಪ್ರಾಂಶುಪಾಲ ಶಮಿಯುಲ್ಲಾ, ಮಲ್ಟಿ ಜಿಮ್ ಸದಸ್ಯರು, ಕುಟುಂಬ ವರ್ಗದವರು, ರೋಟರಿ ಕ್ಲಬ್ ಸದಸ್ಯರು ಹಾಜರಿದ್ದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ನ್ಯಾಯವಾದಿ ಬಿ.ಕೆ. ಧನಂಜಯ ರಾವ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಘುಚಂದ್ರ ಟಿ. ಜಿ. ವಂದಿಸಿದರು.