ಧರ್ಮಸ್ಥಳ: ನಾರ್ಯ ಪೊದುಂಬಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಗದ್ದೆಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅ. 19ರಂದು ನಡೆಯಲಿರುವ ಕೆಸರ್ ದ ಕಂಡಡ್ ಪರ್ಬದ ಗೊಬ್ಬು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಸೆ. 28ರಂದು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಪ್ರಸಾದ್ ಪಾಂಗಣ್ಣಯ ಅವರ ಉಪಸ್ಥಿತಿಯಲ್ಲಿ ಬಿಡುಗಡೆ ಮಾಡಲಾಯಿತು.



ಉತ್ಸವ ಸಮಿತಿ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ನಿಶಾನ್ ಬಂಗೇರ, ಉಪಾಧ್ಯಕ್ಷ ಮೋಹನ್ ಅರಿಕೋಡಿ, ಶೇಖರ್ ಗೌಡ ಅರಿಕೋಡಿ, ಹಾಗೂ ಜೊತೆ ಕಾರ್ಯದರ್ಶಿ ಸಂದೀಪ್ ಗೌಡ, ಸದಸ್ಯರುಗಳಾದ ನರೇಶ್ ದೇವಾಡಿಗ, ಜಗದೀಶ್ ಗೌಡ ಅರಿಕೋಡಿ, ರಕ್ಷಿತ್ ಪುತ್ತಿಲ, ರೋಹಿತ್ ನಾರ್ಯ, ದಿನೇಶ್ ಪುತ್ತಿಲ, ರವಿ ಪುತ್ತಿಲ, ಪ್ರಶಾಂತ್, ವಿಜಯ ಶೆಟ್ಟಿ , ಸ್ವಾತಿ, ನಿಶ್ಮಿತ, ಅಕ್ಷತಾ, ಉಪಸ್ಥಿತರಿದ್ದರು.