ಮಚ್ಚಿನ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳಿಂದ ಕಬಡ್ಡಿ ಮ್ಯಾಟ್ ಹಸ್ತಾಂತರ ಹಾಗೂ ಉದ್ಘಾಟನಾ ಸಮಾರಂಭ ನಡೆಯಿತು. ಕಬಡ್ಡಿಯಲ್ಲಿ ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದ ಸ್ಪರ್ಧಿಸಲು ಮಕ್ಕಳಿಗೆ ಅಭ್ಯಾಸ ನಡೆಸಲು ದಾನಿಗಳಾದ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಬಿಗ್ ಬ್ರದರ್ಸ್ ಫೌಂಡೇಶನ್ ಲಾನ್ಸಿ ಪಿಂಟೊ ಮಡಂತ್ಯಾರು,. ಶ್ರೀವತ್ಸ ಪ್ರಭಾಕರ್ ದುಬೈ, ಮಚ್ಚಿನ ಗ್ರಾಮ ಪಂಚಾಯತಿ ನಿಕಟಪೂರ್ವ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಶ್ರೀದೇವಿ ಟ್ರೇಡರ್ಸ್ ಮಾಲಕ ಪ್ರಶಾಂತ್ ಶೆಟ್ಟಿ, ಮಡಂತ್ಯಾರು, ಜಯಂತ ಪೂಜಾರಿ ಬಳ್ಳಮಂಜ, ಜಯ ಪೂಜಾರಿ ಮುದಲಡ್ಕ ಅವರು ಶಾಲಾ ಪ್ರಾಂಶುಪಾಲೆ ಅಕ್ಷತಾ, ದೈಹಿಕ ಶಿಕ್ಷಕ ರಾಧಾಕೃಷ್ಣ ಅವರಿಗೆ ಹಸ್ತಾಂತರಿಸಿದರು. ಶಾಲಾ ಶಿಕ್ಷಕಿ ಸುಪ್ರೀತ ಸ್ವಾಗತಿಸಿ, ಧನ್ಯವಾದ ನೀಡಿದರು.