ಅಂಡಿಂಜೆ: ಗ್ರಾಮ ಪಂಚಾಯತ್ ಮಟ್ಟದ ನಿಸರ್ಗ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

0

ಅಂಡಿಂಜೆ: ಗ್ರಾಮ ಪಂಚಾಯತ್ ನಿಸರ್ಗ ಸಂಜೀವಿನಿ ಗ್ರಾಮ್ ಪಂಚಾಯತ್ ಮಟ್ಟದ ಒಕ್ಕೂಟ ರಿಜಿಸ್ಟರ್ ಇದರ ಎರಡನೇ ವರ್ಷದ ವಾರ್ಷಿಕ ಮಹಾಸಭೆಯು ಒಕ್ಕೂಟದ ಅಧ್ಯಕ್ಷೆ ಆಶಾ ನೆಲ್ಲಿಂಗೇರಿ ಅವರ ಅಧ್ಯಕ್ಷತೆಯಲ್ಲಿ ಸೆ. 18ರಂದು ಶ್ರೀ ರಾಮ ಶ್ರೀ ವಿನಾಯಕ ಭಜನಾ ಮಂದಿರದಲ್ಲಿ ನಡೆಯಿತು.

ಶ್ರೀದೇವಿ ಸಂಜೀವಿನಿ ಸದಸೈ ಜಯಮಾಲಾ ಅವರು ಪ್ರಾರ್ಥನೆ ಹಾಡಿದರು. ರಮಣಿ ಹೆಗ್ಡೆ ಬಂದ ಅತಿಥಿಗಳನ್ನು ಸ್ವಾಗತಿಸಿದರು. ಗೌರವಾನ್ವಿತ ಗ್ರಾಮ ಪಂಚಾಯತ್ ಅಧ್ಯಕ್ಷ ನಿತಿನ್ ಮುಂಡೇವು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ತಾಲೂಕು ಸಂಜೀವಿನಿ ಕಾರ್ಯಕ್ರಮ ವ್ಯವಸ್ಥಾಪಕಿ ಪ್ರತಿಮಾ ಮಾತನಾಡಿ ಸಂಜೀವಿನಿ ಯೋಜನೆಯ ಮಹಿಳೆಯರು ಹೇಗೆ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು ಯೋಜನೆಯಲ್ಲಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಮುಖ್ಯಪುಸ್ತಕ ಬರಹಗಾರರಾದ ಮಲ್ಲಿಕಾ ವಾರ್ಷಿಕ ವರದಿ ಮತ್ತು ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು. ಮತ್ತು ಅನುಮೋದನೆಯನ್ನು ಪಡೆಯಲಾಯಿತು.

ಶ್ರೀದೇವಿ ಸಂಜೀವಿನಿ ಸದಸ್ಯೆ ಶಾಂಭವಿ ಶೆಟ್ಟಿ, ಪರಿಸರ ಸ್ನೇಹಿ ಜೂಟ್ ಬ್ಯಾಗ ತಯಾರಿಸಿದ್ದು, ಅದನ್ನು ಸಂಜೀವಿನಿ ಬ್ರಾಂಡ್ ಅಸ್ಮಿತೆ ಹೆಸರಿನಲ್ಲಿ ಬಿಡುಗಡೆ ಮಾಡಲಾಯಿತು. PMEGP ಬ್ಯಾಂಕ್ ಸಾಲದ ಬಗ್ಗೆ ಬ್ಯಾಗ್ ಉತ್ಪಾದನಾ ಘಟಕವನ್ನು ಆರಂಭಿಸಿದ ಬಗ್ಗೆ ತನ್ನ ಅನುಭವ ಹಂಚಿಕೊಂಡರು. ಒಕ್ಕೂಟದ ವ್ಯಾಪ್ತಿಯಲ್ಲಿರುವ ಪಂಚ ಸೂತ್ರಗಳನ್ನು ಪಾಲಿಸುವ ಉತ್ತಮ ದಾಖಲಾತಿಗಾಗಿ ಶ್ರೀ ಸಾಯಿ ಸಂಜೀವಿನಿ ಸಾವ್ಯ ಪ್ರಥಮ, ಸ್ವರ್ಣ ಸಂಜೀವಿನಿ ನೆಲ್ಲಿಂಗೇರಿ ದ್ವಿತೀಯ, ಭಾಗ್ಯಲಕ್ಷ್ಮಿ ಸಂಜೀವಿನಿ ಅಂಡಿಂಜೆಗೆ ತೃತೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಿಸರ್ಗ ಸಂಜೀವಿನಿ ಗ್ರಾಮ್ ಪಂಚಾಯತ್ ಮಟ್ಟದ ಒಕ್ಕೂಟದ ವ್ಯಾಪಾರ ಅಭಿವೃದ್ಧಿ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಮಹಾಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಯಿತು. ಸುದರ್ಶನಿ ಹೆಗ್ಡೆ ಇದನ್ನು ಮಂಡಿಸಿದರು. ಸಂಜೀವಿನಿಯ ಉದ್ದೇಶಗಳನ್ನು ತಿಳಿದುಕೊಂಡು ತಮ್ಮನ್ನು ಸಂಘಕ್ಕೆ ಸೇರ್ಪಡೆ ಮಾಡುವಂತೆ ಮನವಿ ಮಾಡಿದ ಸಾವ್ಯವಾಡಿನ 10 ಸದಸ್ಯರ ಗುಂಪನ್ನು ಸಭೆಯಲ್ಲಿ ಸಾಂಕೇತಿಕವಾಗಿ ಪುಸ್ತಕ ಮತ್ತು ಹೊನೀಡಿ ಗೌರವಿಸಲಾಯಿತು. ಮುಂದೆ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ನಡೆಯಿತು. ಒಕ್ಕೂಟದ ಅಧ್ಯಕ್ಷೆ ಆಶಾ ಅವರು ನೂತನ ಪದಾಧಿಕಾರಿಗಳಿಗೆ ಒಕ್ಕೂಟದ ದಾಖಲಾತಿ ಮತ್ತು ಹೂ ನೀಡುವುದರ ಮೂಲಕ ವೇದಿಕೆಗೆ ಬರಮಾಡಿಕೊಂಡರು.

ಒಕ್ಕೂಟದ ನೂತನ ಅಧ್ಯಕ್ಷರಾಗಿ ಸುದರ್ಶಿನಿ ಹೆಗ್ಡೆ, ಉಪಾಧ್ಯಕ್ಷರಾಗಿ ರಮಣಿ ಹೆಗ್ಡೆ, ಕಾರ್ಯದರ್ಶಿಯಾಗಿ ಶಾಲಿನಿ, ಜೊತೆ ಕಾರ್ಯದರ್ಶಿಯಾಗಿ ಸರೋಜಾ, ಕೋಶಾಧಿಕಾರಿಯಾಗಿ ಸುಹಾಸಿನಿ ಅಂಡಿಂಜೆ, ಸದಸ್ಯರಾಗಿ ಮಲ್ಲಿಕಾ ಎಸ್., ಮೋಹಿನಿ ನಾಯ್ಕ, ನೀಲಮ್ಮ ವನಿತಾ ಹೆಗ್ಡೆ, ಸೌಮ್ಯ, ಮರಿಯಾಶಾಂತಿ, ವನಿತಾ, ಚಂದ್ರಿಕಾ, ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡರು. ಜಿಲ್ಲಾ ಸಂಜೀವಿನಿ ವ್ಯವಸ್ಥಾಪಕಿ ಶಕುಂತಲಾ ಮಾತನಾಡಿ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ಬೆಳ್ತಂಗಡಿ ತಾಲೂಕು ಕೃಷಿಯೇತರ ವ್ಯವಸ್ಥಾಪಕ ನಿತೀಶ್ ಕುಮಾರ್ ಮಾತನಾಡಿ ಸದಸ್ಯರಿಗೆ ಬ್ಯಾಂಕ್ ಸಾಲದ ಬಗ್ಗೆ ಮಾಹಿತಿ, ಸದಸ್ಯರು ತಯಾರಿಸಿದ ಉತ್ಪನ್ನಗಳಿಗೆ ಬೇಕಾದ ಸರ್ಟಿಫಿಕೇಟ್ ಗಳ ಬಗ್ಗೆ, ಉತ್ಪನ್ನಗಳ ಬ್ರಾಂಡಿಂಗ್ ಬೇಕಾದ ಮಾಹಿತಿಯನ್ನು ನೀಡಿದರು. ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್ ಕಾರ್ಯಕ್ರಮದ ಪ್ರಾರಂಭದಿಂದ ಹಿಡಿದು ಪ್ರತಿಯೊಂದು ಹಂತದಲ್ಲೂ ಸಂಪೂರ್ಣ ಸಹಕಾರ ನೀಡಿದರು.

ಸದಸ್ಯರಿಗೆ ರಸಪ್ರಶ್ನೆ ಕಾರ್ಯಕ್ರಮ, ನೂತನ ಪದಾಧಿಕಾರಿಗಳಿಗೆ ಪದಗ್ರಹಣ, ಮಾದಕ ವ್ಯಸನ ಮುಕ್ತ ಕರ್ನಾಟಕ ಪ್ರತಿಜ್ಞೆ ವಿಧಿ ಬೋಧಿಸಿದರು. ಲಿಂಗತ್ವ ದೌರ್ಜನ್ಯ ನಿವಾರಣೆ ಬಗ್ಗೆ ಮಾಹಿತಿ ನೀಡಿದರು. ಸಂಜೀವಿನಿ ಹಾಡನ್ನು ಸದಸ್ಯರಿಂದ ಹಾಡಿಸಿದರು. ಕಾರ್ಯಕ್ರಮದ ಬೆನ್ನೆಲುಬಾಗಿ ನಿಂತು ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು. ಒಕ್ಕೂಟದಲ್ಲಿ ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅಧ್ಯಕ್ಷೆ ಆಶಾ ನೆಲ್ಲಿಂಗೇರಿ, ಆಶಾ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.

ಸನ್ಮಾನಿತ ಅಧ್ಯಕ್ಷರು ಮಾತನಾಡಿ ಒಕ್ಕೂಟವು ಇನ್ನಷ್ಟು ಅಭಿವೃದ್ಧಿಯನ್ನು ಕಾಣಲಿ ತಮ್ಮ ಸಹಕಾರ ಎಂದಿಗೂ ಒಕ್ಕೂಟದ ಜೊತೆಗಿದೆ ತಮ್ಮ ಸಹಕಾರಕ್ಕಾಗಿ ಅಭಿನಂದನೆ ಸಲ್ಲಿಸಿದರು. ಮಹಾಸಭೆಯ ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶ್ವೇತಾ, ಸದಸ್ಯರಾದ ಜಗದೀಶ್ ಹೆಗ್ಡೆ, ಹರೀಶ್ ಹೆಗ್ಡೆ, ಪರಮೇಶ್ವರ, ಸರೋಜಾ, ಸುಜಾತ, ಜಯಂತಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಆರಂಬೋಡಿ ಎಂ.ಬಿ.ಕೆ. ಸುಮತಿ, ಹೊಸಂಗಡಿ ಎಂ.ಬಿ.ಕೆ ಸುಮಾ, ಕಾಶಿಪಟ್ಟಣ ಎಂ.ಬಿ.ಕೆ. ಉಷಾಲತಾ, ಮರೋಡಿ ಎಂ.ಬಿ.ಕೆ. ಹರಿಣಾಕ್ಷಿ, ವೇಣೂರು ಎಂ.ಬಿ.ಕೆ ಸುಲತ ಹಾಜರಿದ್ದು, ಸಭೆಯಲ್ಲಿ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಒಕ್ಕೂಟದಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಸದಸ್ಯರಿಗೆ ನೆನಪಿನ ಕಾಣಿಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಭೆಯಲ್ಲಿ ಹಾಜರಿದ್ದ ಉತ್ತಮ ಹಾಜರಾತಿ ಹೊಂದಿದ ಸಂಘವನ್ನು ಗುರುತಿಸಿ ಗೌರವಿಸಲಾಯಿತು. ಸದಸ್ಯರು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಒದಗಿಸಿದ್ದು, ಶಾಂಭವಿಯವರ ಜೂಟ್ ಬ್ಯಾಗ್, ಮಲ್ಲಿಕಾ ಎಸ್. ಮನೆಯಲ್ಲಿಯೇ ತಯಾರಿಸಿದ ದೀಪದ ಬತ್ತಿ ಮತ್ತು ಅಕ್ಕಿ ರೊಟ್ಟಿ, ಮಮತಾ ಜೈನ್ ಅವರು ತಯಾರಿಸಿದ ಉಪ್ಪಿನಕಾಯಿ, ಸುರೇಖಾ ತಯಾರಿಸಿದ ಫಿನಾಯಿಲ್ ಈ ನಾಲ್ಕು ಮಾದರಿ ಮಹಿಳೆಯರಿಗೆ ಸಭೆಯಲ್ಲಿ ಹೂ ನೀಡಿ ಗೌರವಿಸಲಾಯಿತು.

ಸ್ವಸಹಾಯ ಸಂಘದ ಸದಸ್ಯರಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಗಿ ಸಂಘ ವಾರ್ಡ್ ಒಕ್ಕೂಟ ಗ್ರಾಮ ಪಂಚಾಯತ ಮಟ್ಟದ ಒಕ್ಕೂಟಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸದಸ್ಯರಿಗೆ ಕ್ವಿಜ್ ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು. ವೇದಿಕೆಯಲ್ಲಿರುವ ಅತಿಥಿಗಳಿಗೆ ಸಂಜೀವಿನಿ ಸದಸ್ಯರು ತಯಾರಿಸಿದ ಉತ್ಪನ್ನಗಳನ್ನು ನೆನಪಿನ ಕಾಣಿಕೆಯಾಗಿ ನೀಡುವುದರ ಮೂಲಕ ಸದಸ್ಯರನ್ನು ಪ್ರೋತ್ಸಾಹಿಸಲಾಯಿತು.

ಮಹಾಸಭೆಯಲ್ಲಿ 300ಕ್ಕಿಂತಲೂ ಅಧಿಕ ಸ್ವಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು. ಎಸ್. ಕೆ. ಕ್ಯಾಟರಿಂಗ್ ಅವರಿಂದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮಹಾಸಭೆಯ ವಿಶೇಷತೆಗಳು ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಒಕ್ಕೂಟದ ವ್ಯಾಪಾರ ಅಭಿವೃದ್ಧಿ ಯೋಜನೆಯನ್ನು ಮಹಾಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿರುವುದು ಅಂಡಿಂಜೆ ನಿಸರ್ಗ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ರಿಜಿಸ್ಟರ್. ಶಾಂಭವಿ ಶೆಟ್ಟಿಯವರು ತಯಾರಿಸಿದ ಪರಿಸರ ಸ್ನೇಹಿ ಜೂಟ್ ಬ್ಯಾಗ್ ಅಸ್ಮಿತೆ, ಸಂಜೀವಿನಿ ಬ್ರಾಂಡಿನಲ್ಲಿ ಬಿಡುಗಡೆ ಮಾಡಿರುವುದು. ಕಾರ್ಯಕ್ರಮದ ನಿರೂಪಣೆಯನ್ನು ಸೌಮ್ಯ ಪ್ರಶಾಂತ ನಡೆಸಿಕೊಟ್ಟರು. ಮಮತಾ ಕಾರ್ಯಕ್ರಮದ ಛಾಯಾಗ್ರಾಹಕರಾಗಿ ಮತ್ತು ವತ್ಸಲ ಸುನೀತ ಸಹಕರಿಸಿದರು. ಸ್ಥಳೀಯ ಸಂಪನ್ಮೂಲ ವ್ಯಕ್ತಿ ಸುರೇಖಾ ಅವರು ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here