ಕಣಿಯೂರು: ಧರ್ಮಸ್ಥಳದಲ್ಲಿ ನಡೆಯುವ ಸತ್ಯದರ್ಶನ ಕಾರ್ಯಕ್ರಮದ ಪೂರ್ವಭಾವಿ ಸಭೆ

0

ಕಣಿಯೂರು: ಸೆಪ್ಟೆಂಬರ್ 18:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಿಯೂರು ವಲಯ ಹಾಗೂ ವಲಯದ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಭಜನಾ ಮಂಡಳಿಗಳ ಪದಾಧಿಕಾರಿಗಳು, ದೇವಸ್ಥಾನ, ದೈವಸ್ಥಾನಗಳ ಮುಖ್ಯಸ್ಥರು, ಸಹಕಾರಿ ಬ್ಯಾಂಕ್ ನ ಅಧ್ಯಕ್ಷರ ಸಮ್ಮುಖದಲ್ಲಿ ಕೊರಿಂಜಾ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಸೆ.28ರಂದು ಧರ್ಮಸ್ಥಳದಲ್ಲಿ ನಡೆಯುವ ಸತ್ಯದರ್ಶನ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.

ಈ ಸಭೆಯ ಅಧ್ಯಕ್ಷತೆಯನ್ನು ಸತ್ಯದರ್ಶನ ಕಾರ್ಯಕ್ರಮದ ವಲಯ ಸಂಚಾಲಕ ಪ್ರಫುಲ್ಲಚಂದ್ರ ಅಡ್ಯಾoತಾಯ ವಹಿಸಿದ್ದರು. ಪೂರ್ವಭಾವಿ ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಎಸ್.ಡಿ.ಎಂ ಶಾಲೆಯ ನಿವೃತ್ತ ಶಿಕ್ಷಕ ಸೋಮಶೇಖರ್ ಶೆಟ್ಟಿ ಅವರು ಮಾತನಾಡುತ್ತ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಧಿಕಾರಿಯಾಗಿ 21ನೇ ವಯಸ್ಸಿನಲ್ಲಿ ಪಟ್ಟಾಭಿಶಿಕ್ತಾರಾದ ವೀರೇಂದ್ರ ಹೆಗ್ಗಡೆ ಅವರು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಸಮಾಜದ ಕಟ್ಟಕಡೆಯ ವ್ಯಕ್ತಿಯು ಗೌರವ ಯುತವಾಗಿ ಬಾಳಿ ಬದುಕಬೇಕೆಂದು ಆಶೀಸಿದರು.

ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದರು ಎಂದು ತಿಳಿಸಿದರು. ವಲಯ ಸಂಚಾಲಕಿ ಪ್ರಫುಲ್ಲ ಚಂದ್ರ ಅವರು ಮಾತನಾಡಿ ಧರ್ಮಾಧಿಕಾರಿಗಳು ಮಾಡಿದಂತಹ ಜನಪರ ಕಾರ್ಯಗಳನ್ನು ನೆನಪಿಸುತ್ತ ಸತ್ಯ ದರ್ಶನ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಮತ್ತು ಸಭೆಯಲ್ಲಿ ಗ್ರಾಮಮಟ್ಟದ ಸಂಚಾಲಕ ಸಹಸಂಚಾಲಕರನ್ನು ಆಯ್ಕೆ ಮಾಡಲಾಯಿತು.

ಕೊರಿಂಜಾ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಅವರು ಮಾತನಾಡುತ್ತಾ ಬಡವರ ಶ್ರೇಯೋಭಿವೃದ್ಧಿಗಾಗಿ ಜನಪರ ಕಾರ್ಯಕ್ರಮಗಳನ್ನು ಮಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಯು ಸಮಾಜದಲ್ಲಿ ಗೌರವ ಯುತವಾಗಿ ಬಾಳಬೇಕು ಎಂದು ಸಮಾಜಕ್ಕೆ ಒಳಿತನ್ನು ಮಾಡಿದ ಧರ್ಮಧಿಕಾರಿಗಳ ಮನೋಸ್ಥೈರ್ಯವನ್ನು ಕುಗ್ಗಿಸುವ ಷಡ್ಯಂತ್ರಗಳು ಸಮಾಜದಲ್ಲಿ ನಡೆಯುತ್ತಿದೆ.

ಇವುಗಳನ್ನೆಲ್ಲ ಮೆಟ್ಟಿ ನಿಂತು ಹೆಗ್ಗಡೆಯವರ ಜೊತೆ ನಾವಿದ್ದೇವೆ ಎನ್ನುವ ಮುಖಾಂತರ ಸತ್ಯ ದರ್ಶನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಹೆಗ್ಗಡೆಯವರ ಮನೋಸ್ಥೆರ್ಯ ಗಟ್ಟಿಗೊಳಿಸುವ ಎಂದು ತಿಳಿಸಿದರು. ಪೂರ್ವಭಾವಿ ಸಭೆಯಲ್ಲಿ ರೈತಬಂಧು ಆಹಾರೋಧ್ಯಮದ ಮಾಲಕ ಶಿವಶಂಕರ ನಾಯಕ್, ಜನಜಾಗೃತಿ ಮಾಜಿ ವಲಯಧ್ಯಕ್ಷ ರಾಜಶ್ರೀ ಹೆಗ್ಡೆ, ಸಿ. ಎ. ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪನೆಕ್ಕರ, ಕಲ್ಲೇರಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಸುನಿಲ್ ಗೌಡ ಅಣವು, ಕಣಿಯೂರು ಪಂಚಾಯತ್ ಅಧ್ಯಕ್ಷ ಸೀತಾರಾಮ ಮಡಿವಾಲ, ಮಾಜಿ ಮಂಡಲ ಅಧ್ಯಕ್ಷ ಸುದರ್ಶನ್ ಹೆಗ್ಡೆ, ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಗೌಡ ಮುಗೇರಡ್ಕ, ಕಣಿಯೂರು ವಲಯದ ಮೇಲ್ವಿಚಾರಕ ಶಿಲ್ಪಾ ಹಾಗೂ ವಲಯದ ಗಣ್ಯರು ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಒಕ್ಕೂಟ ಅಧ್ಯಕ್ಷರು, ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು, ಅಭಿಮಾನಿಗಳಾಗಿ ಒಟ್ಟು 70ಜನರು ಭಾಗವಹಿಸಿದರು. ಸೇವಾಪ್ರತಿನಿಧಿ ಸೀತಾರಾಮ ಆಳ್ವಾ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here