ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘ ದ್ವಿತೀಯ ವರ್ಷದ ವಾರ್ಷಿಕ ಸಭೆ ಮತ್ತು ವಿಶ್ವಕರ್ಮ ಜಯಂತಿಯ ಪ್ರಯುಕ್ತ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯು
ಉಜಿರೆ ಶಾರಾದ ಮಂಟಪದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ರಾಜ ಮಾಚಾರು ಅವರು ವಹಿಸಿದ್ದರು.
ಸಂಘದ ಅಧ್ಯಕ್ಷರು ಮತ್ತು ಬಿ.ಎಂ.ಎಸ್. ನ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು. ವಿಶ್ವಕರ್ಮ ಜಯಂತಿಯ ದಿನವೇ ನಿಜವಾದ ಕಾರ್ಮಿಕ ದಿನ. ಕಾರ್ಮಿಕರ ದಿನಾಚರಣೆ ದೇಶದಲ್ಲಿ ಕಮ್ಯುನಿಸ್ಟ್ ಮಾನಸಿಕತೆಯಿಂದ ಮೇ ಡೇ ಯನ್ನು ಆಚರಿಸುತ್ತದೆ. ಆದರೆ ಮೇ ಒಂದರಂದು ಕಾರ್ಮಿಕರ ಮೇಲೆ ಆದ ರಕ್ತಪಾತದ ದಿನದಂದು ಕಾರ್ಮಿಕ ದಿನ ಆಚರಿಸುವುದು ಯೋಗ್ಯವಲ್ಲ. ವಿಶ್ವಕರ್ಮ ಆದಿ ಗುರು, ಆದಿ ಶಿಲ್ಪಿ, ಪುರಾಣ ಹಾಗೂ ಇತಿಹಾಸಗಳಲ್ಲಿ ಅನೇಕ ಶಿಲ್ಪಕಲೆಯ ನಿರ್ಮಾತೃಗಳಲ್ಲಿ ವಿಶ್ವಕರ್ಮರ ಪಾತ್ರ ಹಿರಿದಾದದು ಮತ್ತು ಪ್ರತಿಯೊಬ್ಬ ಕುಶಲಕರ್ಮಿಯು ವಿಶ್ವಕರ್ಮರಿಗೆ ಪ್ರಾರ್ಥಿಸಿ ಕೆಲಸ ಆರಂಭಿಸುವುದು ನಾವು ಈಗಲೂ ಸಮಾಜದಲ್ಲಿ ನೋಡುತ್ತೇವೆ ಎಂದು ಅವರು ತಿಳಿಸಿದರು.
ರಬ್ಬರ್ ಮಂಡಳಿಯ ಅಧಿಕಾರಿ ದೀಪ್ತಿ ದಾಸ್ ಅವರು ರಬ್ಬರ್ ಕಾರ್ಮಿಕರಿಗೆ ಹಾಗೂ ಸ್ವಂತ ತೋಟದ ಸ್ವಂತ ಟ್ಯಾಪರ್ ಬೆಳೆಗಾರರಿಗೆ ಹಾಗೂ ಟ್ಯಾಪರ್ ಕಾರ್ಮಿಕರಿಗೆ ರಬ್ಬರ್ ಬೋರ್ಡ್ ನಿಂದ ಇರುವ ಸೌಲಭ್ಯಗಳಾದ ಜೀವವಿಮೆ ಮತ್ತು ಅಪಘಾತ ವಿಮೆ, ವಿದ್ಯಾರ್ಥಿ ವೇತನ ,ಆಸ್ಪತ್ರೆಯ ಚಿಕಿತ್ಸೆ ವೆಚ್ಚ, ಕಾರ್ಮಿಕರ ಮಕ್ಕಳ ಮದುವೆಗೆ ಸಹಾಯಧನ ಕಾರ್ಮಿಕರ ಗೃಹ ನಿರ್ಮಾಣಕ್ಕೆ ಸಹಾಯ ಧನ ರಬ್ಬರ್ ಮಂಡಳಿಯಿಂದ ದೊರಕುವುದು. ಎಂದು ಮಾಹಿತಿ ನೀಡಿದರು.
ಬೆಳ್ತಂಗಡಿ ಅಮೂಲ್ಯ ಆರ್ಥಿಕ ಸಾಕ್ಷರತ ಕೇಂದ್ರದ ಆರ್ಥಿಕ ಸಮಲೋಚಕಿ, ಸಂಪನ್ಮೂಲ ವ್ಯಕ್ತಿ ಉಷಾ ನಾಯಕ್ ಅವರು ಕೇಂದ್ರ ಸರಕಾರದಿಂದ ಜನಸಾಮಾನ್ಯರಿಗೆ ಇರುವ ಅಪಘಾತ ವಿಮೆ, ಜೀವವಿಮ, ಪಿಂಚಣಿ, ಜನಸಾಮಾನ್ಯರಿಗೆ ಸಿಗುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಸ್ಟೇಟ್ ಬ್ಯಾಂಕ್ ಬೆಳ್ತಂಗಡಿಯ ಅಸಿಸ್ಟೆಂಟ್ ಮ್ಯಾನೇಜರ್ ಸಾತ್ವಿಕ್ ಕಳಮರ್ವ ಸ್ಟೇಟ್ ಬ್ಯಾಂಕಿನಿಂದ ಗ್ರಾಹಕರಿಗೆ ಸಿಗುವ ಅಪಘಾತ ವಿಮೆ, ಹೆಲ್ತ್ ಇನ್ಶೂರೆನ್ಸ್ ಯೋಜನೆ, ಅಪಘಾತ ವಿಮೆಗಳ ಮಾಹಿತಿಯನ್ನು ನೀಡಿದರು ಉಜಿರೆ ರಬ್ಬರ್ ಬೆಳೆಗಾರರ ಸಹಕಾರಿ ಸಂಘದ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಅವರು ಕಾರ್ಮಿಕ ಮತ್ತು ಮಾಲಕರು ಪರಸ್ಪರ ಶತ್ರುಗಳಲ್ಲ ಕಾರ್ಮಿಕ ನಿಷ್ಠೆಯಿಂದ ಕೆಲಸ ನಿರ್ವಹಿಸಬೇಕು. ಮಾಲಕ ಕಾರ್ಮಿಕನನ್ನು ತನ್ನ ಕುಟುಂಬದ ಒಬ್ಬ ವ್ಯಕ್ತಿಯನ್ನು ಪರಿಭಾವಿಸಿ ಕಾರ್ಮಿಕರಿಗೆ ಸಂಕಷ್ಟ ಆದಾಗ ಸಹಾಯ ಮಾಡಬೇಕು.
ಉಜಿರೆ ಸೊಸೈಟಿಯ ವ್ಯಾಪ್ತಿಯ ಕಾರ್ಮಿಕ ನಿಗೂ ಉಜಿರೆ ರಬ್ಬರ್ ಸೊಸೈಟಿಯಿಂದ ಸಹಾಯಗಳಾಗುವ ಯೋಜನೆಗಳನ್ನು ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರುವೆವು ಎಂದು ಆಶ್ವಾಸನೆ ನೀಡಿದರು. ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘದ ತಾಲೂಕು ಅಧ್ಯಕ್ಷ ಉದಯ ಬಿ.ಕೆ. ಅವರು ಮಾತನಾಡಿ ಸಂಘಟಿತರಾಗುವ ಮೂಲಕ ನಾವು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಈ ಬಗ್ಗೆ ಈಗಾಗಲೇ ರಬ್ಬರ್ ಕಾರ್ಮಿಕರ ಸಂಘಟನೆ ಬಹಳ ಸೌಲಭ್ಯಗಳನ್ನು ತೆಗೆಸಿಕೊಟ್ಟಿದೆ ಇದು ಉತ್ತಮವಾದ ಬೆಳವಣಿಗೆ. ನಮ್ಮ ಸಂಘದ ವತಿಯಿಂದ ನಿಮ್ಮ ಕಾರ್ಯಕ್ಕಾಗಿ ಪೂರ್ಣ ಬೆಂಬಲ ಸಹಕಾರವನ್ನು ನೀಡುತ್ತೇವೆ ಎಂದರು.

ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಅವರು ರಬ್ಬರ್ ಕಾರ್ಮಿಕರಿಗೆ ಕಳೆದ ವರ್ಷ ರಬ್ಬರ್ ಮಂಡಳಿಯಿಂದ ಲಭಿಸುವ ಇನ್ಸೂರೆನ್ಸ್ ಅನ್ನು ಮಾಡಿಸಿರುತ್ತದೆ ಮತ್ತು ಕಾರ್ಮಿಕರ ಮಕ್ಕಳಿಗೆ 2,50,000 ವಿದ್ಯಾರ್ಥಿವೇತನವನ್ನು ಎಲ್ಲಾ ಸಹಾಯ ಮಾಡಿ ತೆಗೆಸಿ ಕೊಡುವುದರಲ್ಲಿ ಯಶಸ್ವಿಯಾಗಿದೆ ಹಾಗೆಯೇ ಮುಂದೆ ಶಿವಮೊಗ್ಗ ಜಿಲ್ಲೆಯನ್ನು ಕೂಡ ನಮ್ಮ ಸಂಘದ ಕಾರ್ಯ ಚಟುವಟಿಕೆಯನ್ನು ವಿಸ್ತರಿಸುವುದುಕ್ಕಾಗಿ ತಿಳಿಸಿದರು. ಕ್ಷೇಮ ನಿಧಿ ಯೋಜನೆಯನ್ನು ಕಾರ್ಮಿಕರ ಮಧ್ಯೆ ತಂದು ಕಾರ್ಮಿಕರಿಗೆ ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ಕೂಡ ಸಹಾಯವನ್ನು ಮಾಡಿರುತ್ತದೆ ಹಾಗೂ ರಬ್ಬರ್ ಟ್ಯಾಪಿಂಗ್ ನೊಂದಿಗೆ ಇತರ ಉಪಕಸುಬುಗಳನ್ನು ಮಾಡಲು ತರಬೇತಿಗಳನ್ನು ಆಯೋಜಿಸಲು ಉದ್ದೇಶಿಸಿದೆ. ಈಗಾಗಲೇ ಐದು ರಬ್ಬರ್ ಟ್ಯಾಪ್ಪರ್ ಟ್ರೈನಿಂಗ್ ಗಳನ್ನು ರಬ್ಬರ್ ಮಂಡಳಿಯ ಸಹಾಯದಿಂದ ಮಾಡಲಾಗಿರುತ್ತದೆ ಎಂದು ತಿಳಿಸಿದರು.
ಹಿರಿಯ ಮಹಿಳಾ ರಬ್ಬರ್ ಕಾರ್ಮಿಕರಾದ ಪಾರ್ವತಿ ಮಾಚಾರು ಅವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು ಹಾಗೂ 80% ಗಿಂತ ಹೆಚ್ಚು ಅಂಕವನ್ನು ಪಡೆದ ಉಜಿರೆ ಸುಳ್ಯ ಪುತ್ತೂರು ಭಾಗಗಳ 15 ಕಾರ್ಮಿಕರ ಮಕ್ಕಳಿಗೆ ಸನ್ಮಾನವನ್ನು ಮಾಡಲಾಯಿತು. ಕುಮಾರಿ ಮಂಜುಳಾ ಅವರು ವಿದ್ಯಾರ್ಥಿ ವೇತನ ಲಭಿಸಿರುವ ಬಗ್ಗೆ ಸಂಘಕ್ಕೆ ಕೃತಜ್ಞತೆ ಸಲ್ಲಿಸಿ ಮುಂದಿನ ದಿನಗಳಲ್ಲಿ ರಬ್ಬರ್ ಮಂಡಳಿ ನಮಗೆ ಸಿಗುವಂತಹ ವಿದ್ಯಾರ್ಥಿವೇತನ ಈಗಿನ ಶಿಕ್ಷಣಕ್ಕೆ ಸಾಕಾಗುವುದಿಲ್ಲ ಆದುದರಿಂದ ರಬ್ಬರ್ ಮಂಡಳಿಯಿಂದ ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಹೆಚ್ಚು ಮಾಡಬೇಕು ಎಂದು ವಿನಂತಿಸಿದರು. ಮತ್ತು ರಬ್ಬರ್ ಕಾರ್ಮಿಕರ ತಾಲೂಕು ವಲಯದ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ಮಾಚಾರು ” ಬೆಳ್ತಂಗಡಿ ರಬ್ಬರ್ ಟ್ಯಾಪ್ಪರ್ ಮಜ್ದೂರ್ ಸಂಘದ ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರಾದ ಹರೀಶ್ ಜೆ.ಕೆ., ಸಂಘದ ಪುತ್ತೂರು ತಾಲೂಕಿನ ಅಧ್ಯಕ್ಷೆ ಅಮೃತಲಿಂಗಂ, ಸುಳ್ಯ ತಾಲೂಕಿನ ಅಧ್ಯಕ್ಷ ಶಶಿಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ಲೋಲಾಕ್ಷಿ ಅವರು ಪ್ರಾರ್ಥನೆಯನ್ನು ನೆರವೇರಿಸಿದರು. ಕಾರ್ಯಕ್ರಮದ ಸ್ವಾಗತವನ್ನು ಸಂಘದ ತಾಲೂಕು ಅಧ್ಯಕ್ಷ ಹರೀಶ್ ಜೆ.ಕೆ. ಸ್ವಾಗತಿಸಿ, ಬಿಎಂಎಸ್ ತಾಲೂಕು ಸಂಯೋಜಕ ಶಾಂತಪ್ಪ ಕಲ್ಮಂಜ ನಿರೂಪಿಸಿದರು. ಸಂಘದ ಪುತ್ತೂರು ತಾಲೂಕು ಅಧ್ಯಕ್ಷೆ ಅಮೃತಲಿಂಗಂ ವಂದಿಸಿದರು.