ಜೆಸಿಐ ಭಾರತದ ವಲಯ 15ರ ಚಿಗುರು ತರಬೇತಿ ಕಾರ್ಯಾಗಾರ

0

ಬೆಳ್ತಂಗಡಿ: ಜೆಸಿಐ ಭಾರತದ ವಲಯ 15ರ ನೂತನ ಜೇಸಿಗಳಿಗೆ ಚಿಗುರು ಎನ್ನುವ ತರಬೇತಿ ಕಾರ್ಯಾಗಾರ ಗುರುವಾಯನಕೆರೆಯ ಎಕ್ಸೆಲ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಜೆಸಿಐ ಬೆಳ್ತಂಗಡಿಯ ಆತಿಥ್ಯದಲ್ಲಿ ಆ. 31ರಂದು ನಡೆಯಿತು.

ಜೆಸಿಐ ವಲಯ15 ವಲಯಾಧ್ಯಕ್ಷ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಜೆಸಿಐ ವಲಯ15 ರ ಪೂರ್ವ ವಲಯಾಧ್ಯಕ್ಷ ಜೆಸಿಐ ಸೆನೆಟರ್ ರೋಯನ್ ಉದಯ ಕ್ರಾಸ್ತಾ ಭಾಗವಹಿಸಿ ನೂತನ ಜೇಸಿಗಳನ್ನು ಉದ್ದೇಶಿಸಿ ಜೇಸಿಯಿಂದ ಸಮಾಜದಲ್ಲಿ ನಾವು ಹೇಗೆ ಗುರುತಿಸಿಕೊಳ್ಳಬಹುದು ಹಾಗೂ ನಮ್ಮನ್ನು ಹೇಗೆ ತೊಡಗಿಸಿಕೊಳ್ಳುವ ಮಾತಾನಾಡಿದರು.

ಗೌರವ ಅತಿಥಿಯಾಗಿ ಕುಂದಾಪುರದ ಉದ್ಯಮಿ ಹುಸೈನ್ ಹೈಕಾಡಿ, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕ ವಿಘ್ನೇಶ್ ಪ್ರಸಾದ್ ವಲಯ15 ಪ್ರಾಂತ್ಯ ಡಿ ಯ ವಲಯ ಉಪಾಧ್ಯಕ್ಷ ರಂಜೀತ್ ಎಚ್‌ಡಿ, ಇನ್ನೊರ್ವ ಉಪಾಧ್ಯಕ್ಷ ಸಂತೋಷ್ ಶೆಟ್ಟಿ ವಿಟ್ಲ ಉಪಸ್ಥಿತರಿದ್ದರು. ಸಭಾಧ್ಯಕ್ಷರಾಗಿ ಬ್ರಹ್ಮಾವರದ ಯಶವಂತ ಕುಮಾರ್ ಸಭೆ ನಡೆಸಿಕೊಟ್ಟರು.

ಜೇಸಿ ಸುಧೀರ್ ಕೆ.ಎನ್., ಶ್ರೇಯಾ ಶೆಟ್ಟಿ, ಮಮಿತಾ ಸುಧೀರ್, ಭವ್ಯಶ್ರೀ ಕೀರ್ತಿರಾಜ್, ಅನುದೀಪ್ ಜೈನ್, ಪ್ರಮೋದ್ ಕೆ. ಅತಿಥಿಗಳನ್ನು ಸಭೆಗೆ ಪರಿಚಯಿಸಿದರು, ಮಧುರ ರಾಘವ್ ಜೇಸಿ ವಾಣಿ ಉದ್ಘೋಷಿಸಿದರು. ರಾಷ್ಟ್ರೀಯ ತರಬೇತುದಾರ ಡಾ. ರಾಘವೇಂದ್ರ ಹೊಳ್ಳ ಹಾಗೂ ವಲಯ ತರಬೇತುದಾರೆ ಅಶ್ವಿನಿ ಐತಾಳ್ ನವ ಜೇಸಿಗಳಿಗೆ ತರಬೇತಿಯನ್ನು ನಡೆಸಿಕೊಟ್ಟರು. ಉಡುಪಿ ಮತ್ತು ದಕ್ಷಿಣ ಕನ್ನಡದ ನೂತನ ಜೇಸಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು. ಜೆಸಿಐ ಬೆಳ್ತಂಗಡಿಯ ಸದಸ್ಯರು, ಪದಾಧಿಕಾರಿಗಳು, ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು. ಜೆಸಿಐ ಬೆಳ್ತಂಗಡಿಯ ಘಟಕಾಧ್ಯಕ್ಷೆ ಆಶಾಲತಾ ಪ್ರಶಾಂತ್ ಸಭೆಗೆ ಸ್ವಾಗತಿಸಿದರು. ಚಿಗುರು ಕಾರ್ಯಕ್ರಮ ನಿರ್ದೇಶಕಿ ಹೇಮಾವತಿ ಕೆ. ಅವರು ಕಾರ್ಯಾಗಾರ ಸಂಯೋಜಿಸಿದರು. ವಲಯ ಕಾರ್ಯದರ್ಶಿ ರವಿಚಂದ್ರ ಪಾಟಾಳಿ ವಂದಿಸಿದರು.

LEAVE A REPLY

Please enter your comment!
Please enter your name here