ವಸಂತಿಯವರಿಗೆ ಸಾಯಿರಾಂ ಫ್ರೆಂಡ್ಸ್ ವತಿಯಿಂದ ಗೃಹ ನಿರ್ಮಾಣ- ಇಂದು ದಾರಂದ ಮೂಹೂರ್ತ: ಸುದ್ದಿ ನ್ಯೂಸ್ ಫಲಶ್ರುತಿ

0

ಅಮರ್ಜಾಲ್: ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವಸಂತಿ ಆನ್ ಲೈ ನ್ ಮೋಸಕ್ಕೆ ತನ್ನ ಖಾತೆಯಲ್ಲಿದ್ದ 65000 ಮೊತ್ತ ಕಳೆದುಕೊಂಡಿದ್ದರು. ಈ ಬಗ್ಗೆ ಸುದ್ದಿ ಬಿಡುಗಡೆ/ಸುದ್ದಿ ನ್ಯೂಸ್ ವಿಸ್ಕೃತ ವರದಿ ಮಾಡಿತ್ತು. ಇದರ ಫಲಶ್ರುತಿಯಾಗಿ ಗುರುವಾಯನಕೆರೆಯ ಶಕ್ತಿನಗರ ಸಾಯಿರಾಮ್ ಫ್ರೆಂಡ್ಸ್ ವಸಂತಿಯವರಿಗೆ ಅಮರ್ಜಾಲ್‌ನಲ್ಲಿ ಮನೆ ಕಟ್ಟಿ ಕೊಡುವ ಕೆಲಸ ಮಾಡಿದ್ದು, ಆ.27ರಂದು ದಾರಂದ ಮುಹೂರ್ತ ನೆರವೇರಿದೆ. ಈ ವೇಳೆ ವಸಂತಿ ಕುಟುಂಬಸ್ಥರು, ಸಾಯಿರಾಮ್ ಫ್ರೆಂಡ್ಸ್‌ನ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here