ವೇಣೂರು: ಪರಿಶ್ರಮ ಕೋಚಿಂಗ್ ಸೆಂಟರ್ ಅದ್ಧೂರಿ ಪ್ರಾರಂಭ

0

ವೇಣೂರು: ಮೊಟ್ಟ ಮೊದಲ ಬಾರಿಗೆ ಅತ್ಯುನ್ನತ ತಂತ್ರಜ್ಞಾನ ಡಿಜಿಟಲ್ ಬೋರ್ಡ್ ಹಾಗೂ ನುರಿತ ಉಪನ್ಯಾಸಕರೊಂದಿಗೆ CET, NEET ಮತ್ತು JEE ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪರಿಶ್ರಮ ಕೋಚಿಂಗ್ ಸೆಂಟರ್ ಆ.24ರಂದು ಅದ್ಧೂರಿಯಾಗಿ ಆರಂಭಗೊಂಡಿತು.

ಈ ಪ್ರಾರಂಭೋತ್ಸವ ಸಮಾರಂಭದಲ್ಲಿ ಕುಂಭಶ್ರೀ ಆಂಗ್ಲ ಮಾಧ್ಯಮದ ಸಂಸ್ಥಾಪಕರಾದ ಗಿರೀಶ್ ಕೆ.ಎಚ್. ಅಧ್ಯಕ್ಷತೆಯನ್ನು ವಹಿಸಿಕೊಂಡರು. ಸಮಾರಂಭವನ್ನು ಗೌರವಾನ್ವಿತ ಡಾ. ಶಾಂತಿಪ್ರಸಾದ್ ರವರು ಡಿಜಿಟಲ್ ಬೋರ್ಡ್‌ಗೆ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಡಾ. ಕುಮಾರಸ್ವಾಮಿ ಉಡುಪ, JCBM ಕಾಲೇಜು, ಶೃಂಗೇರಿ ಆಗಮಿಸಿದ್ದರು. ಉದ್ಘಾಟನಾ ಭಾಷಣದಲ್ಲಿ ಡಾ. ಶಾಂತಿಪ್ರಸಾದ್ ರವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ, ಪರಿಶ್ರಮ ಸಂಸ್ಥೆಯ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಎಲ್ಲರೂ ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಅಧ್ಯಕ್ಷ ಗಿರೀಶ್ ಕೆ.ಎಚ್. ಅವರು CET, NEET ಮತ್ತು JEE ತರಗತಿಗಳ ಮಹತ್ವವನ್ನು ಹೀಗೆಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಶ್ರಮಪಡುವ ಅಗತ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಮುಖ್ಯ ಅತಿಥಿ ಡಾ. ಕುಮಾರಸ್ವಾಮಿ ಉಡುಪ ಅವರು ಉಚಿತ ಕಾರ್ಯಾಗಾರವನ್ನು ನೀಡುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು.

ವೇದಿಕೆ ಮೇಲೆ ಅಸೀನರಾಗಿದ್ದ ಎಸ್.ಎಸ್. ಎಜುಕೇಶನ್ ಟ್ರಸ್ಟ್‌ನ ಸಂಸ್ಥಾಪಕ ಲಿಂಗರಾಜು ರವರು ಪರಿಶ್ರಮ ವೇಣೂರಿನಲ್ಲಿ ಮಾದರಿ ಸಂಸ್ಥೆಯಾಗಿ ಬೆಳೆವಂತಾಗಲಿ ಎಂದು ಆಶಿಸಿದರು. ಇದೇ ವೇಳೆ ಅಸಿಸ್ಟೆಂಟ್ ಪ್ರೊಫೆಸರ್‌ಗಳು ನಂದೀಶ್ ಕುಮಾರ್ ಶೆಟ್ಟಿ, ಭರತ್ ಕುಮಾರ್, ಹಾಗು ಕಾರ್ಯಾಗಾರವನ್ನು ನಡೆಸಲು ಶಿವಮೊಗ್ಗದಿಂದ ಆಗಮಿಸಿದ್ದ ವಿಜ್ಞೇಶ್ ರಾಜ್ ಎಸ್. ಮತ್ತು ವಿನಯ್ ಬಿ.ಎಸ್. ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ಮನೋಜ್ ಎಸ್. ಮತ್ತು ಅಶ್ವಿತ್ ಕುಲಾಲ್ ಎಲ್ಲ ಅತಿಥಿಗಳಿಗೆ ಸಸಿಗಳನ್ನು ನೀಡಿ ಅರ್ಥಪೂರ್ಣ ಸ್ವಾಗತವನ್ನು ಕೋರಿದರು.

LEAVE A REPLY

Please enter your comment!
Please enter your name here