
ಬೆಳ್ತಂಗಡಿ: ಉತೃಷ್ಟ ಗುಣಮಟ್ಟ ಹಾಗೂ ಶುದ್ಧ ಚಿನ್ನ ಬೆಳ್ಳಿ ವಜ್ರಾಭರಣಕ್ಕೆ ಹೆಸರುವಾಸಿಯಾದ ಬೆಳ್ತಂಗಡಿಯ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನಲ್ಲಿ ಆ. 23ರಂದು ಕೃಷ್ಣ ವೇಷ ಸ್ಪರ್ಧೆ ನಡೆಯಿತು.
ಬೆಳ್ತಂಗಡಿ ಅಮರ್ ಡ್ರಗ್ ಹೌಸ್ ಸುಜಾತ ಜಿ ಭಟ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೃಷ್ಣ ವೇಷ ಸ್ಪರ್ಧೆಗೆ ತೀರ್ಪುಗಾರರಾಗಿ ಬಂದಿರುವ ವಾಣಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಮಹಾಬಲ ಗೌಡ, ಪುಂಜಾಲಕಟ್ಟೆ ಕಾಲೇಜಿನ ಉಪನ್ಯಾಸಕಿ ಹೇಮಾವತಿ, ಬೆಳ್ತಂಗಡಿ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖಾ ಪ್ರಬಂಧಕ ಲೋಹಿತ್ ಕುಮಾರ್, ಸುದ್ದಿ ಮಾಧ್ಯಮದ ಪ್ರಧಾನ ನಿರೂಪಕಿ ಶ್ರೇಯಾ ಶೆಟ್ಟಿ, ಸುದ್ದಿ ಉದಯದ ಸಂತೋಷ್ ಕುಮಾರ್ ಕೋಟ್ಯಾನ್, ಶಾಖೆಯ ಉಪಸ್ಥಿತರಿದ್ದರು.
ಪ್ರಜ್ಞಾ ಓಡಿಲ್ಣಾಳ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನ ಸಿಬ್ಬಂದಿಗಳು ಹಾಜರಿದ್ದರು.