
ಲಾಯಿಲ: ಕರ್ನೋಡಿ ಸ.ಉ.ಪ್ರಾ. ಶಾಲೆಯಲ್ಲಿ ಬೆಳ್ತಂಗಡಿ ಹಾಗೂ ಬಂಗಾಡಿ ವಲಯ ಮಟ್ಟದ ಖೋ ಖೋ ಪಂದ್ಯಾಟವು ಆ.22ರಂದು ನಡೆಯಿತು. ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮವನ್ನು ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ. ಕೆ. ಅವರು ದೀಪ ಪ್ರಜ್ವಲಿಸಿ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಎಸ್‌ಡಿಎಂಸಿ ಉಪಾಧ್ಯಕ್ಷೆ ವಿಜಯ, ಮುಖ್ಯ ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ, ತಾಲೂಕು ದೈ. ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಜಯ, ವಲಯ ಕ್ರೀಡಾ ಸಂಯೋಜಕರಾದ ಅಖಿಲ್ ಕುಮಾರ್, ಸಿರಪ್ ವಾರಿಜಾ ಹಾಗೂ ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಜಗನ್ನಾಥ್ ಎಂ. ಸ್ವಾಗತಿಸಿ, ಈ ಉದ್ಘಾಟನಾ ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಗಂಗಾರಾಣಿ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ತ್ರಿಶಾಲ ರವರು ಧನ್ಯವಾದವಿತ್ತರು.
ಖೋ ಖೋ ಪಂದ್ಯಾಟದ ಸಮಾರೋಪ ಸಭಾ ಕಾರ್ಯಕ್ರಮವು ನಡೆದು, ಸಭೆಯ ಅಧ್ಯಕ್ಷರಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಲೈಲಾ, ಮುಖ್ಯ ಅತಿಥಿಗಳಾಗಿ ಗ್ರಾ. ಪಂ ಸದಸ್ಯ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಗಣೇಶ್ ಆರ್., ಕ್ರೀಡಾ ವಲಯ ಸಂಯೋಜಕರು ಅಖಿಲ್ ಕುಮಾರ್, SDMC ಅಧ್ಯಕ್ಷೆ ಸೌಮ್ಯ ಉಪಸ್ಥಿತರಿದ್ದರು.
ಬೆಳ್ತಂಗಡಿ ಹಾಗೂ ಬಂಗಾಡಿ ವಲಯದ ಹಲವು ಶಾಲೆಗಳು ಭಾಗವಹಿಸಿದ್ದು, ಬಾಲಕರ ವಿಭಾಗದಲ್ಲಿ ಸರಕಾರಿ ಪ್ರೌಢಶಾಲೆ ಕೊಯ್ಯೂರು ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಸ. ಹಿ ಪ್ರಾ ಶಾಲೆ ಕೊಯ್ಯೂರು ಪಡೆದುಕೊಂಡಿತು.
ಬಾಲಕಿಯರ ವಿಭಾಗದಲ್ಲಿ ಸ. ಉ. ಪ್ರಾ. ಶಾಲೆ ಕೊಯ್ಯೂರು ಪ್ರಥಮ ಸ್ಥಾನವನ್ನು ಪಡೆದು, ದ್ವಿತೀಯ ಸ್ಥಾನವನ್ನು ಸ. ಉ. ಪ್ರಾ. ಶಾಲೆ ಕರ್ನೋಡಿ ಗಳಿಸಿತು. ಶಾಲೆಗಳ ಪೋಷಕರು, ಎಸ್.ಡಿ. ಎಂ.ಸಿ ಪದಾಧಿಕಾರಿಗಳು, ಶಿಕ್ಷಕರು ಭಾಗವಹಿಸಿದ್ದರು.
ಶಿಕ್ಷಣ ಇಲಾಖೆ, ಸ. ಉ. ಪ್ರಾ. ಶಾಲೆ ಕರ್ನೋಡಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮವನ್ನು ಶಿಕ್ಷಕಿ ಮಮತಾ ಕೆ. ಸ್ವಾಗತಿಸಿ, ಶಿಕ್ಷಕ ಕೃಷ್ಣಕುಮಾರ್ ನಿರೂಪಿಸಿ, ಉಷಾ ಕೆ. ಧನ್ಯವಾದವಿತ್ತರು.