
ಉಜಿರೆ: ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಬಗ್ಗೆ ಅವಹೇಳನಕಾರಿ ಮಾತನಾಡಿರುವ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ದಾಖಲಾದ ಕೇಸ್ ಹಿನ್ನಲೆ ಆ.21ರಂದು ಉಡುಪಿ ಪೊಲೀಸರು ಮಹೇಶ್ ಶೆಟ್ಟಿ ಬಂಧನಕ್ಕೆ ಉಜಿರೆಗೆ ಆಗಮಿಸಿದರು.
ಈ ವೇಳೆ ಮಹೇಶ್ ಶೆಟ್ಟಿ ಪರ ವಕೀಲರು ಪೊಲೀಸರನ್ನು ಕಾನೂನಾತ್ಮಕವಾಗಿ ಪ್ರಶ್ನಿಸಿದಾಗ ವಿಸ್ತೃತ ಚರ್ಚೆ ನಡೆದಿದೆ. ಗಿರೀಶ್ ಮಟ್ಟಣ್ಣನವರ್ ಕೂಡ ಪ್ರಶ್ನಿಸಿದರು. ನಂತರ ಬಹಳ ಕಾಲ ತಿಮರೋಡಿ ಮನೆಯಲ್ಲಿ ಹೈಡ್ರಾಮ ನಡೆದು, ಅಂತಿಮವಾಗಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆದಿದ್ದಾರೆ.
ಅವರನ್ನು ಬಂಧಿಸಿಲ್ಲ ಬದಲಾಗಿ ಅವರು ತಮ್ಮ ಖಾಸಗಿ ವಾಹನದಲ್ಲಿ ವಿಚಾರಣೆಗೆ ಬ್ರಹ್ಮಾವರಕ್ಕೆ ತೆರಳುತ್ತಿದ್ದಾರೆಂದು ತಿಮರೋಡಿಯ ಬೆಂಬಲಿಗರು ತಿಳಿಸಿದ್ದಾರೆ.