ಉಜಿರೆ: ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಂಸ್ಕೃತೋತ್ಸವ

0

ಉಜಿರೆ: “ಸಮ್ಯಕ್ ಭಾಷಾ ಸಂಸ್ಕೃತ ಭಾಷಾ, ಎಲ್ಲಾ ಭಾಷೆಗಳೂ ಸಂಸ್ಕೃತಮಯವಾಗಿದೆ. ಸಂಸ್ಕೃತ ಇರದ ಕ್ಷೇತ್ರವಿಲ್ಲ” ಎಂದು ಎಸ್.ಡಿ.ಎಮ್ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ. ಪ್ರಸನ್ನ ಕುಮಾರ್ ಐತಾಳ್ ಅವರು ಹೇಳಿದರು. ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ‘ಆತ್ಮಾನಂ ಸಂಸ್ಕೃತಂ ಮನ್ಯೆ’ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದ ‘ಸಂಸ್ಕೃತೋತ್ಸವ’ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.

ಸಂಸ್ಕೃತ ಜಯ ಘೋಷಣೆಗಳೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಮೂಹ ಗಾಯನ ಹಾಗೂ ವಿಶ್ವ ಸಂಸ್ಕೃತ ದಿನದ ಮಹತ್ವದ ಕುರಿತು ಭಾಷಣ ಆಯೋಜಿಸಲಾಗಿತ್ತು.

ಶಾಲಾ ಪ್ರಾಂಶುಪಾಲ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಕಿ ಸುಜನಾ ವಾಲ್ತಾಜೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಶಶಾಂಕ್ ಮತ್ತು ಸಹನ ನಿರೂಪಿಸಿದರು. ವಿದ್ಯಾರ್ಥಿ ಕ್ರಿಸ್ಟಿ ವಂದಿಸಿದರು.

LEAVE A REPLY

Please enter your comment!
Please enter your name here