ಬೆಳಾಲು: ಮೈತ್ರಿ ಯುವಕ ಮಂಡಲದಿಂದ 21ನೇ ವರ್ಷದ ಮೊಸರು ಕುಡಿಕೆ ಉತ್ಸವ

0

ಬೆಳಾಲು: ಮೈತ್ರಿ ಯುವಕ ಮಂಡಲದಿಂದ 21ನೇ ವರ್ಷದ ಮೊಸರು ಕುಡಿಕೆ ಉತ್ಸವ, ಕೃಷ್ಣವೇಷ, ಆಟೋಟ ಸ್ಪರ್ಧೆ ಆಗಸ್ಟ್ 17ರಂದು ಸಂಘದ ವಠಾರದಲ್ಲಿ ಉದ್ಘಾಟನಾ ಸಮಾರಂಭ ನೆರವೇರಿತು.

ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜಯರಾಮ್ ಮಯ್ಯ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಬೆಳಾಲು ಪಂಚಾಯತ್ ಉಪಾಧ್ಯಕ್ಷೆ ಗೀತಾ ಹಾಗೂ ಮೈತ್ರಿ ಯುವಕ ಮಂಡಲ ಗೌರವಾಧ್ಯಕ್ಷ ರಾಜೇಶ್ ಪಾರಳ, ಅಧ್ಯಕ್ಷ ನಿತಿನ್ ಮೋನಿಸ್, ಕಾರ್ಯದರ್ಶಿ ವಿಘ್ನೇಶ್ ಅನಂತೋಡಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಿತಿನ್ ಮೋನಿಸ್ ಸ್ವಾಗತಿಸಿ, ಸಂಘದ ಸಲಹೆಗಾರರು ನೋಟರಿ ವಕೀಲ ಶ್ರೀನಿವಾಸಗೌಡ ಹಾಗೂ ಅಧ್ಯಾಪಕ ಭರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಕೃಷ್ಣವೇಷ ಸ್ಪರ್ಧೆಯೂ ವಿಶೇಷ ಆಕರ್ಷಣೆಗೊಂಡಿತ್ತು. ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆಯೂ ನಡೆಯಿತು. ವಿಘ್ನೇಶ್ ಅನಂತೋಡಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here