ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

0

ಬೆಳ್ತಂಗಡಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಪ್ರತಿಭಾ ವೇದಿಕೆ, ರೋವರ್ಸ್-ರೇಂಜರ್ಸ್ ಘಟಕ, ಯುವ ರೆಡ್ ಕ್ರಾಸ್ ಘಟಕ ಮತ್ತು ಸಾಂಸ್ಕೃತಿಕ ವೇದಿಕೆ ಇವುಗಳ ಸಹಯೋಗದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರೊನಾಲ್ಡ್ ಪ್ರವೀಣ್ ಕೊರಯ ಅವರು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ಮಾಡುವ ವಿವಿಧ ಆಹಾರ ಪದಾರ್ಥಗಳ ಪ್ರದರ್ಶನ, ಆಟಿಯಲ್ಲಿ ಆಡುವಂತಹ ಆಟಗಳು ಮತ್ತು ತುಳುನಾಡಿನ ಆಟಿ ತಿಂಗಳ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ರೀತಿಯ ಪ್ರದರ್ಶನವನ್ನು ಕಾಲೇಜಿನ ವಿದ್ಯಾರ್ಥಿಗಳು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ತರಗತಿಗಳಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ನಿರ್ವಹಣಾ ಶಾಸ್ತ್ರದ ಮುಖ್ಯಸ್ಥರಾದ ಪ್ರೊ. ರಶ್ಮಿ ಅವರು ಆಟಿ ತಿಂಗಳ ವಿಶೇಷತೆ ಮತ್ತು ಆ ತಿಂಗಳಲ್ಲಿ ಉಪಯೋಗಿಸುವ ಆಹಾರ ಪದಾರ್ಥಗಳ ಹಿಂದೆ ಇರುವ ವೈಜ್ಞಾನಿಕತೆ ಬಗ್ಗೆ ಸವಿವರವಾಗಿ ತಿಳಿಸಿದರು. ಐಕ್ಯೂ ಎಸಿ ಸಂಚಾಲಕ ಡಾ. ಕುಶಾಲಪ್ಪ ಎಸ್. ಅವರು ತುಳುನಾಡಿನ ಆಟಿ ಸಂಸ್ಕೃತಿಯ ಬಗ್ಗೆ ತಿಳಿಸಿದರು. ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ರೋವರ್ ಸ್ಕೌಟ್ ಲೀಡರ್ ಡಾ. ರವಿ ಎಂ. ಎನ್. ಹಾಗೂ ರೇಂಜರ್ ಲೀಡರ್ ಡಾ. ರಾಜೇಶ್ವರಿ ಎಚ್. ಎಸ್. ಕಾರ್ಯಕ್ರಮದ ಆಯೋಜನೆಯನ್ನು ಮಾಡಿದರು.

ವೇದಿಕೆಯಲ್ಲಿ ಗ್ರಂಥಪಾಲಕ ಜಗದೀಶ್ ಎಸ್. ಹಾಗೂ ಸಾಂಸ್ಕೃತಿಕ ವೇದಿಕೆ ಸಂಚಾಲಕ ಪ್ರೊ. ಮಾರುತಿ ಜಿ. ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ತೀರ್ಪುಗಾರರಾಗಿ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಧಾಕೃಷ್ಣ ಹೆಚ್. ಬಿ., ಜಗದೀಶ್ ಎಸ್., ಪ್ರೊ. ರಶ್ಮಿ ಎಚ್., ಸುರೇಶ್ ಡಿ ಮತ್ತು ವಿಜಯಲಕ್ಷ್ಮಿ ರಾವ್ ಅವರು ಭಾಗವಹಿಸಿದ್ದರು. ಅಂತಿಮ ಬಿಕಾಂನ ಕೌಶಿಕ್ ಶೆಟ್ಟಿ ಸ್ವಾಗತಿಸಿದರು. ಶುಭವತಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here