
ಬೆಳಾಲು: ಅನಂತೋಡಿ ಫ್ರೆಂಡ್ಸ್ ಬೆಳಾಲು ಇದರ ಆಶ್ರಯದಲ್ಲಿ ನಡೆಯುವ 15ನೇ ವರ್ಷದ ದೀಪಾವಳಿ ಹಬ್ಬದ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟದ ಪೂರ್ವಭಾವಿ ಸಭೆ ನೂತನ ಪದಾಧಿಕಾರಿಗಳ ಆಯ್ಕೆಯ ನಡೆಯಿತು. ಅಧ್ಯಕ್ಷರಾಗಿ ಸಂತೋಷ್ ನಾಯ್ಕ ಕುದ್ದಂಟೆ, ಕಾರ್ಯದರ್ಶಿಯಾಗಿ ಹರ್ಷಿತ್ ಗೌಡ ಎರ್ದೋಟ್ಟು, ಆಯ್ಕೆಯಾದರು.
ಇತರ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ರೂಪೇಶ್ ಪೂಜಾರಿ ಪೋಸೊಟ್ಟು, ಕೋಶಾಧಿಕಾರಿ ಸುಮಂತ್ ನಾಯ್ಕ ಕೊಡಂಗೆ, ಜತೆ ಕಾರ್ಯದರ್ಶಿಯಾಗಿ ಕಿರಣ್ ಮೇಗಿನಮನೆ, ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿ ದಿನೇಶ್ ಗೌಡ ಮರುವದಡಿ, ಸುಮಿತ್ ಆಚಾರ್ಯ ಅನಂತೋಡಿ, ಹರೀಶ್ ಮುಂಡೆತ್ಯಾರು,ಶ್ರೀ ಸತೀಶ್ ಗೌಡ ಎಳ್ಳುಗದ್ದೆ, ಕಿರಣ್ ಸುವರ್ಣ ಇರಂತ್ಯಾರು ಮತ್ತು ಸದಸ್ಯರನ್ನು ಆಯ್ಕೆಮಾಡಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ಗೌಡ ಶ್ರೀಸೌಧ ಬೆಳಾಲು ಹಾಗೂ ಅನಂತೇಶ್ವರ ಫ್ರೆಂಡ್ಸ್ ಗೌರವಸಲಹೆಗಾರರು ಉಪಸ್ಥಿತರಿದ್ದರು.