ಮಡಂತ್ಯಾರು ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆಯಿಂದ ಆಟಿಡೊಂಜಿ ದಿನ ಕೆಸರ್ದ ಗೊಬ್ಬು ಕ್ರೀಡಾಕೂಟ

0

ಮಚ್ಚಿನ: ಮಡಂತ್ಯಾರು ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆಯ ಆಶ್ರಯದಲ್ಲಿ ಆ.10ರಂದು ಆಟಿಡೊಂಜಿ ದಿನ ಕೆಸರ್ದ ಗೊಬ್ಬು ಕ್ರೀಡಾಕೂಟವು ಪಲ್ಕ್ ಲಕ್ಷ್ಮಿ ಗದ್ದೆಯಲ್ಲಿ ನಡೆಯಿತು. ಕಾರ್ಯಕ್ರಮದ ಪ್ರಗತಿಪರ ಕೃಷಿಕ ಪೂವಪ್ಪ ಮೂಲ್ಯ ಬಂಗಿದೊಟ್ಟು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆಯ ಕ್ರೀಡಾಕೂಟ ಸಮಿತಿ ಅಧ್ಯಕ್ಷ ವಿಜಯ ಮಡಕ್ಕಿಲ ಅವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ, ಶ್ರೀ ಕ್ಷೇತ್ರ ನಡುಬೆಟ್ಟುವಿನ ಆಡಳಿತ ಮೊಕ್ತೇಸರ ವಿಶ್ವನಾಥ ಮೂಲ್ಯ, ಮಂಗಳೂರು ಗೋಕರ್ಣನಾಥ ಕೋ ಆಪರೇಟರ್ ಬ್ಯಾಂಕ್ ಆಡಳಿತ ಮಂಡಳಿಯ ಅಧ್ಯಕ್ಷ ಜಯರಾಮ ಕಾರಂದೂರು, ದ. ಕ. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಸಂತಿ ಲಕ್ಷ್ಮಣ್, ಮಚ್ಚಿನ ಗ್ರಾಮ ಪಂಚಾಯತ್ ಸದಸ್ಯರಾದ ಡೀಕಮ್ಮ ಮಡಕ್ಕಿಲ್ಲ ಮತ್ತು ಜಯಶ್ರೀ ವಡ್ಡ, ಮಚ್ಚಿನ ಕೃಷಿ ಪತ್ತಿನ ಸಹಕಾರಿ ಸಂಘದ ಸುಜಾತ ಪಿ ಸಾಲಿಯನ್, ಮೂಲ್ಯರ ಯಾನೆ ಕುಂಬಾರ ಮಹಿಳಾ ಸಂಘ ಬಳ್ಳಮಂಜದ ಅಧ್ಯಕ್ಷೆ ಭವ್ಯ ಜಯರಾಮ್ ಹಾಗೂ ಮಂಗಳೂರಿನ ನ್ಯಾಯವಾದಿ ಸ್ವಾತಿ ಪ್ರದೀಪ್ ಉಪಸ್ಥಿತರಿದ್ದರು.

ಕೆಸರ್ದ ಗದ್ದೆಯನ್ನು ವಿಶ್ವನಾಥ ಮೂಲ್ಯ ನಡಿಬೆಟ್ಟು ಗದ್ದೆಗೆ ಹಾಲು ಹಾಕಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಮಕ್ಕಳಿಗೆ ಯುವಕರಿಗೆ ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆ ನಡೆಯಿತು. ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಯರ ಯಾನೆ ಕುಂಬಾರದ ಯುವ ವೇದಿಕೆಯ ಮಡಂತ್ಯಾರ್ ವಲಯದ ಅಧ್ಯಕ್ಷರಾದ ಸಚಿನ್ ಬಿ ಕುಲಾಲ್ ಇವರು ವಹಿಸಿದರು.

ಸಮಾರೋಪ ಸಮಾರಂಭದ ಅತಿಥಿಗಳಾಗಿ ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಪರಿವಾರ ಶ್ರೀ ಶಾಸ್ತ್ರವು ದೇವಸ್ಥಾನ ಮಾಣೂರಿನ ಅಧ್ಯಕ್ಷ ಹೊನ್ನಪ್ಪ ಕುಲಾಲ್ ಮಾಣೂರು, ಪ್ರಗತಿಪರ ಕೃಷಿಕ ಗಂಗಾಧರ ಮೂಲ್ಯ ಪೆರ್ನಡ್ಡ, ಮಚ್ಚಿನ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ಯಕ್ಷನ್ ಕುಲಾಲ್, ಬೆಂಗಳೂರಿನ ಉದ್ಯಮಿ ಆಕಾಶ್ ಕುಲಾಲ್ ಮಾಣೂರು, ಮಚ್ಚಿನ ಗ್ರಾಮ ಪಂಚಾಯತ್ ಸದಸ್ಯ ರವಿಚಂದ್ರ ಕಲ್ಲಗುಡ್ಡೆ, ಮಚ್ಚಿನ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಉಮೇಶ್ ಕಲ್ಲಗುಡ್ಡೆ, ನಾಗಬ್ರಹ್ಮ ಎಲೆಕ್ಟ್ರಿಕಲ್ ಮಡಂತ್ಯಾರ್ ಮಾಲಕ ಜಯಂತ್ ಕುಲಾಲ್ ಮಾಲಾಡಿ, ಮಾಲಾಡಿ ಗೆಳೆಯರ ಬಳಗ ಅಧ್ಯಕ್ಷ ವಿಠ್ಠಲ್ ಮೂಲ್ಯ ಮೂಡೊಟ್ಟು, ಪ್ರದೀಪ್ ಅತ್ತಾವರ, ಕಿರಣ್ ಅಂಟೂರು ಇವರು ಉಪಸ್ಥಿತರಿದ್ದರು.

ಅಂಚೆ ವಿತರಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೃಷ್ಣಪ್ಪ ಮೂಲ್ಯ ಬಳ್ಳಮಂಜ, ಓಬಯ್ಯ ಮೂಲ್ಯ ವಡ್ಡ ಇವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದ ವಲಯದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಕ್ರೀಡಾಕೂಟಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಹರ್ಷ ಬಳ್ಳಮಂಜ ಸ್ವಾಗತಿಸಿ ಕೋಶಾಧಿಕಾರಿ ಚಿದಾನಂದ ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here