
ಧರ್ಮಸ್ಥಳ: ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡದ ತನಿಖೆ ನಡೆಯುತ್ತಿರುವಾಗಲೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರ ತಂಡ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಗ್ರಾಮಕ್ಕೆ ಆಗಮಿಸಿ ಮಾಹಿತಿಗಳನ್ನು ಪಡೆದಿದೆ.
ಎನ್.ಎಚ್.ಆರ್.ಸಿ.ಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಸ್.ಪಿ ಯುವರಾಜ್, ಡಿ.ವೈ.ಎಸ್.ಪಿ ರವಿ ಸಿಂಗ್ ಸೇರಿದಂತೆ ಇತರರನ್ನು ಒಳಗೊಂಡ ಎನ್.ಎಚ್.ಆರ್.ಸಿ ತಂಡವು ಆ. 11ರಂದು ಆಗಮಿಸಿದೆ. ಈ ತಂಡವು ಆರಂಭದಲ್ಲಿ ಎಸ್.ಐ.ಟಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ದೂರುದಾರನ ಜತೆಗೆ ಮಾತುಕತೆ ನಡೆಸಿ ಮಹತ್ವದ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.