
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸುಮಟೋ ಕೇಸ್ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಯುವರಾಜ್, ಡಿ.ವೈ.ಎಸ್.ಪಿ ರವಿಸಿಂಗ್ ರವರನ್ನೊಳಗೊಂಡ ತಂಡ ಈಗಾಗಲೇ ಹಲವೆಡೆ ಭೇಟಿ ನೀಡಿದೆ.
SIT ಪೊಲೀಸ್ ಠಾಣೆ, ಧರ್ಮಸ್ಥಳ ಠಾಣೆ ಹಾಗೂ ಧರ್ಮಸ್ಥಳ ಗ್ರಾಮಪಂಚಾಯತ್ ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಜೊತೆ ದಾಖಲೆಗಳನ್ನು ಪಡೆದುಕೊಂಡಿದೆ. ಆ.11ರಂದು ರಾತ್ರಿ 10 ಗಂಟೆಯವರೆಗೂ ಕಾರ್ಯಾಚರಣೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ, ಮಾಹಿತಿ ಸಂಗ್ರಹ ಮಾಡುವ ಕೆಲಸ ನಾಲ್ಕು ಜನರ ತಂಡ ಮಾಡಿದೆ.
ಮುಂದಿನ ಮೂರು ದಿನಗಳ ಕಾಲ ತಾಲೂಕಿನಲ್ಲಿ ಬೀಡುಬಿಡಲಿರುವ ಟೀಮ್ ಹಲವು ಗುರುತುಗಳಿಗೆ ಭೇಟಿ ನೀಡಲಿದೆ. ಆ.11ರಂದು ಬಾಹುಬಲಿ ಬೆಟ್ಟದ ಸಮೀಪದ ಗುರುತು ಸಂಖ್ಯೆ 16ರ ಸ್ಥಳಕ್ಕೂ ಕೂಡ ತೆರಳಿ ಪರಿಶೀಲನೆ ಮಾಡಿದ್ದರು.