ಸಹ ಪ್ರಾಧ್ಯಾಪಕಿ ಹೇಮಲತಾರಿಗೆ ಅಣ್ಣಾಮಲೈ ವಿ.ವಿ.ಯಿಂದ ಡಾಕ್ಟರೇಟ್‌ ಪದವಿ

0

ಬೆಳ್ತಂಗಡಿ: ನಾರಾವಿ ಗ್ರಾಮದ ಹಿರ್ತ್ತೊಟ್ಟು ಜಿನ್ನಪ್ಪ ಬಿ. ಪೂಜಾರಿ ಅವರ ಪತ್ನಿ, ಸಹ ಪ್ರಾಧ್ಯಾಪಕಿ ಹೇಮಲತಾ ಅವರಿಗೆ ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಪಿ.ಎಚ್‌.ಡಿ ಪದವಿ ದೊರಕಿದೆ.

ಮಂಗಳೂರಿನ ಬೆಸೆಂಟ್‌ ಮಹಿಳಾ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಮತ್ತು ಸೆಕೆಟೇರಿಯಲ್‌ ಪ್ರಾಕ್ಟೀಸ್‌ ವಿಭಾಗದ ಸಹ ಪ್ರಾಧ್ಯಾಪಕಿಯಾಗಿರುವ ಹೇಮಲತಾ ಅವರು ಅಣ್ಣಾಮಲೈ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ರಾಮು ಎನ್‌. ಮತ್ತು ಆರ್‌.ವಿ. ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಬಾಲಾಜಿ ಬೋವಿ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದರು.

ಹೇಮಲತಾ ಅವರು ಮಂಡಿಸಿದ ‘ಇಂಪ್ಯಾಕ್ಟ್‌ ಆಫ್‌ ಟ್ರೈನಿಂಗ್‌ ಆನ್‌ ದಿ ಸಾಫ್ಟ್‌ ಅಂಡ್‌ ಹಾರ್ಡ್‌ ಸ್ಕಿಲ್ಸ್‌ ಟುವರ್ಡ್ಸ್‌ ಎಫೀಶಿಯೆನ್ಸಿ ಆಫ್‌ ಎಂಪ್ಲಾಯಿಸ್‌ ಆಫ್‌ ಎಂ.ಎಸ್‌.ಎಂ.ಇ.ಎಸ್‌ ಇನ್‌ ದಕ್ಷಿಣ ಕನ್ನಡ ಡಿಸ್ಟ್ರಿಕ್‌’ (Impact of training on the Soft and Hard skills towards efficiency of employees of MSMEs in Dakshina Kannada District) ಎಂಬ ಮಹಾಪ್ರಬಂಧ ಡಾಕ್ಟರೇಟ್‌ ಪದವಿಗೆ ಆಯ್ಕೆಯಾಗಿದೆ.

ಹೇಮಲತಾ ಅವರು ಶಿರ್ವ ಮಂಚಕಲ್‌ ಗ್ರಾಮದ ಸೋಮಪ್ಪ ಮತ್ತು ಕಂಪಾಬೈ ದಂಪತಿಯ ಪುತ್ರಿ.

LEAVE A REPLY

Please enter your comment!
Please enter your name here