
ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ಬಗ್ಗೆ ತನಿಖೆ ತೀವ್ರಗೊಳಿಸಿರುವ ಎಸ್. ಐ. ಟಿ ಅಧಿಕಾರಿಗಳು ಆ.6ರಂದು ಕೂಡ ಬಂಗ್ಲ ಗುಡ್ಡದ ಮೇಲ್ಭಾಗಕ್ಕೆ ಮುಸುಕುಧಾರಿಯೊಂದಿಗೆ ತೆರಳಿದ್ದಾರೆ.

ಮೇಲ್ಭಾಗದಲ್ಲಿ ಉತ್ಖನನ ಕಾರ್ಯ ಆರಂಭವಾಗಿದ್ದು ಯಾವುದೇ ಕಳೇಬರ ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬೆಳ್ತಂಗಡಿಯ ಎಸ್ಐಟಿ ಕಚೇರಿಯಲ್ಲಿ ಸಭೆ ಇರುವ ಕಾರಣದಿಂದ ಇಂದಿನ ಕಾರ್ಯಾಚರಣೆ ಅಂತ್ಯಗೊಂಡಿದೆ.