
ಅರಸಿನಮಕ್ಕಿ: ಆ. 5ರಂದು ಎಡೆ ಬಿಡದೆ ಸುರಿದ ಮಳೆಗೆ ಕಪಿಲಾ ನದಿ ತುಂಬಿ ಹರಿದಿದ್ದು ನದಿಯಲ್ಲಿ ತೇಲಿ ಬಂದ ಬೃಹತ್ ಗಾತ್ರದ ಮರದ ದಿಮ್ಮಿಗಳಿಂದ ಉಚ್ಚಿಕಟ್ಟ ಬಳಿ ಇರುವ ವೆಂಟೆಡ್ ಡ್ಯಾಮ್ ಎರಡು ಬದಿ ಹಾನಿಗೊಳಗಾಗಿದೆ.
ಪ್ರತಿ ವರ್ಷದ ಮಳೆಗೂ ಈ ಡ್ಯಾಮ್ ಅಲ್ಪ ಪ್ರಮಾಣದ ಹಾನಿಗೆ ಒಳಗಾಗುತ್ತಿತ್ತು. ಪಂಚಾಯತ್ ಅನುದಾನದಲ್ಲಿ ಇದನ್ನು ಸರಿಪಡಿಸಲಾಗುತ್ತಿತ್ತು. ಆದರೆ ಈ ಬಾರಿ ಡ್ಯಾಮ್ ನ ಎರಡು ಬದಿಯ ತಡೆಗಳು ಸಂಪೂರ್ಣ ಹಾಳಾಗಿದ್ದು ಅದಲ್ಲದೆ ಡ್ಯಾಮ್ ನ ಆಧಾರ ಸ್ಥoಭದಂತಿರುವ ಕಂಬಕ್ಕು ಹಾನಿಯಾಗಿದೆ. ಡ್ಯಾಮ್ ನಿರ್ಮಿಸುವಾಗ ಬದಿಯಲ್ಲಿ ಮಣ್ಣು ಸವೆಯದಂತೆ ಹಾಕಿದ್ದ ಸುಮಾರು 100ಲೋಡ್ ನಷ್ಟು ಚರಲ್ ನೀರು ಹರಿಯುವ ರಭಸಕ್ಕೆ ಕೊಚ್ಚಿ ಹೋಗಿದ್ದು ಅಂದಾಜು 1.50 ಲಕ್ಷ ದಿಂದ 2ಲಕ್ಷದಷ್ಟು ಹಾನಿಯಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಪಂಚಾಯತ್ ನಿಂದ ಭರಿಸಲು ಸಾಧ್ಯವಿಲ್ಲ ಆದಷ್ಟು ಬೇಗ ಸರಿ ಪಡಿಸದಿದ್ದಲ್ಲಿ ಇನ್ನೂ ಮುಂದೆ ಬರುವ ಮಳೆಗೆ ಇನ್ನಷ್ಟು ಹಾನಿಯಾಗಿ ಸಂಪೂರ್ಣ ಡ್ಯಾಮ್ ಡ್ಯಾಮೇಜ್ ಆಗುವ ಸಂಭವ ಇದೆ. ಈ ಬಗ್ಗೆ ತಾಲೂಕು ಆಡಳಿತ, ಜಿಲ್ಲಾಡಳಿತ, ಶಾಸಕರ ಗಮನಕ್ಕೂ ತರುತ್ತೇವೆ ಆದಷ್ಟು ಶೀಘ್ರ ಈ ಡ್ಯಾಮ್ ಸರಿಪಡಿಸಿಕೊಡಬೇಕು ಎಂದು ಅರಸಿನಮಕ್ಕಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ. ಎಸ್. ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.