
ಬೆಳ್ತಂಗಡಿ: ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸಾಮಾನ್ಯ ಸಭೆಯು ಆ. 3ರಂದು 3ಗಂಟೆಗೆ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ದಿನೇಶ್ ಕೊಕ್ಕಡ ವಹಿಸಿದ್ದರು. ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್, ರಾಜ್ಯ ಜೊತೆ ಕಾರ್ಯದರ್ಶಿ ಸುರೇಶ್ ಪಿ. ಬಿ., ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ, ಪ್ರಮುಖರಾದ ರಘು ಧರ್ಮಸೇನ್, ಶೇಖರ್ ಕುಕ್ಕೇಡಿ, ಗೋಪಾಲಕೃಷ್ಣ ಕುಕ್ಕಳ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಗೌರವ ಸಲಹೆಗಾರ ಗೋಪಾಲಕೃಷ್ಣ ಕುಕ್ಕಳ ಸಭೆಯ ಉದ್ದೇಶಗಳನ್ನು ಅರುಹಿದರು. ಬೆಳ್ತಂಗಡಿ ತಾಲೂಕಿನಲ್ಲಿ ಸಂಘಟನೆ ಬಲವರ್ಧನೆಗಾಗಿ ಹಲವು ಹೊಸ ಪದಾಧಿಕಾರಿಗಳನ್ನು ಸೇರ್ಪಡೆಗೊಳಿಸಲಾಯಿತು.

ಗೌರವಾಧ್ಯಕ್ಷರಾಗಿ ರಾಘವ ಕಲ್ಮಂಜ, ಅಧ್ಯಕ್ಷರಾಗಿ ದಿನೇಶ್ ಕೆ. ಕೊಕ್ಕಡ, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ್ ವಿ. ಧರ್ಮಸ್ಥಳ, ಉಪಾಧ್ಯಕ್ಷರಾಗಿ ರಾಮ ಪಡಂಗಡಿ, ಅವಿನಾಶ್ ಕುರ್ಲೋಟ್ಟು, ಶ್ರೀನಿವಾಸ್ ಉಜಿರೆ, ಜಗನ್ನಾಥ್ ಕೊಯ್ಯೂರು, ಯಮುನಾ ನಾರಾವಿ, ಜೊತೆ ಕಾರ್ಯದರ್ಶಿಯಾಗಿ ಶಿವಕುಮಾರ್ ಮಡಾಂತ್ಯಾರು, ಚಂದ್ರಶೇಖರ್ ಮೂಡುಕೋಡಿ, ಉಮೇಶ್ ಮಡಂತ್ಯಾರ್, ಕೋಶಾಧಿಕಾರಿಯಾಗಿ ಜಿನ್ನು ಕರಿಮಣೆಲು, ಸಂಘಟನಾ ಕಾರ್ಯದರ್ಶಿಯಾಗಿ ಕೊರಗಪ್ಪ ಕೊಯ್ಯೂರು, ಶಿವಾನಂದ ಪಡಂಗಡಿ, ಯತೀಶ್ ಧರ್ಮಸ್ಥಳ, ಅವಿನಾಶ್ ಕುರ್ತೋಡಿ, ವಿನಯ ಕುಮಾರ್ ಉಜಿರೆ, ಅಜಯ್ ನಾರಾವಿ, ಕಿರಣ್ ಅಳದಂಗಡಿ, ರಾಮ್ ಕುಮಾರ್ ಕರಂಬಾರು, ಆನಂದ ನೆಲ್ಲಿಂಗೇರಿ, ವಿಜಯ ಬಜಿರೆ, ಕೇಶವ ಅಳಕೆ, ಶ್ರೀನಿವಾಸ್ ಪಿ.ಎಸ್, ರಘು ಧರ್ಮಸ್ಥಳ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಗೌರಿ, ಶರತ್ ಕೊಕ್ಕಡ, ಸುರೇಶ ಧರ್ಮಸ್ಥಳ,
ಗೌರವ ಸಲಹೆಗಾರರಾಗಿ ಶೇಖರ್ ಕುಕ್ಕೇಡಿ, ಗೋಪಾಲಕೃಷ್ಣ ಕುಕ್ಕಳ, ಅಮ್ಮ ಕುಮಾರ್, ಚನ್ನಪ್ಪ ಕೊಲ್ಪದಬೈಲು, ಓಬಯ್ಯ ಆರಂಬೋಡಿ, ಬಾಬು ಬೆಳಾಲು, ವೇಣುಗೋಪಾಲ ಕರಂಬಾರ್, ಶಿವಪ್ಪ ಗರ್ಡಾಡಿ, ಬಾಬು ಉಜಿರೆ, ದಿನಕರ ಬಡಕೋಡಿ, ಸುರೇಶ್ ಹೊಕ್ಕಾಡಿ ಅವರು ಆಯ್ಕೆಯಾದರು.