


ಬೆಳ್ತಂಗಡಿ: ತುಳುನಾಡು ಒಕ್ಕೂಟ ಸಂಘಟನೆಯಿಂದ ಆ. 10ರಂದು ಬೆಳಿಗ್ಗೆ 10ರಿಂದ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ 5ನೇ ವರ್ಷದ ಚೆನ್ನೆಮಣೆ ಆಟದ ಸ್ಪರ್ಧೆ ನಡೆಯಲಿದೆ.


ಸ್ಪರ್ಧೆಯು 16 ವರ್ಷದ ಒಳಗಿನ ವರಿಗೆ ಮತ್ತು 16 ವರ್ಷ ಮೇಲ್ಪಟ್ಟವರಿಗೆ ಎರಡು ವಿಭಾಗದಲ್ಲಿ ನಡೆಯಲಿದೆ ಎಂದು
ತುಳುನಾಡು ಒಕ್ಕೂಟದ ಸ್ಥಾಪಕ ಅಧ್ಯಕ್ಷ ಶೈಲೇಶ್ ಆರ್. ಜೆ. ತಿಳಿಸಿದ್ದಾರೆ.









