ರೋಟರಿ ಕ್ಲಬ್ ಬೆಳ್ತಂಗಡಿಯಿಂದ ಏಕ ಕಾಲದಲ್ಲಿ 7 ಇಂಟರಾಕ್ಟ ಕ್ಲಬ್ ಗಳ ಪದಗ್ರಹಣ ಕಾರ್ಯಕ್ರಮ

0

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿಯಿಂದ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಪ್ರಾಯೋಜಿಸಲ್ಪಡುವ ಇಂಟರಾಕ್ಟ ಕ್ಲಬ್ ಗಳ ಪದಗ್ರಹಣ ಕಾರ್ಯಕ್ರಮವು ಜು.19ರಂದು ಶ್ರೀ ಧ.ಮಂ. ಪಿ.ಯು. ಕಾಲೇಜಿನಲ್ಲಿ ನಡೆಯಿತು.

ಏಕ ಕಾಲದಲ್ಲಿ ಏಳು ಇಂಟರಾಕ್ಟ ಕ್ಲಬ್ ಗಳ ಪದಗ್ರಹಣ ವಿಶೇಷವಾಗಿ ಜರುಗಿತು. ಇಂಟರಾಕ್ಟ ಕ್ಲಬ್ ಚೆಯರ್ ಮ್ಯಾನ್ ರೋ. ನಾರಾಯಣ ಭಿಡೆ ಅವರು ಸಂಯೋಜನೆ ಮಾಡಿದ ಈ ಕಾರ್ಯಕ್ರಮದಲ್ಲಿ, ಅಸಿಸ್ಟೆಂಟ್ ಗವರ್ನರ್ ಡಾ. ಎ.ಜೆ ಶೆಟ್ಟಿ ಪದಗ್ರಹಣ ಅಧಿಕಾರಿಯಾಗಿ, ರೋಟರಿ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷ ರೊ. ಪ್ರೊ. ಪ್ರಕಾಶ ಪ್ರಭುಗಳು ಅಧ್ಯಕ್ಷರಾಗಿ, ಕಾಲೇಜಿನ ಪ್ರಾಂಶುಪಾಲ ಪ್ರಮೋದ ಕುಮಾರ್ ಮತ್ತು ಕಾರ್ಯದರ್ಶಿ ಡಾ. ಎಂ.ಎಂ. ದಯಾಕರ್ ಗೌರವ ಮುಖ್ಯ ಅತಿಥಿಯಾಗಿದ್ದರು.

ಶ್ರೀ ಧ. ಮಂ. ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಧರ್ಮಸ್ಥಳದ ಇಂಟರಾಕ್ಟ ಕ್ಲಬ್ ನ ನೂತನ ಅಧ್ಯಕ್ಷರಾಗಿ ಅಮೂಲ್ಯ 9ನೇ ತರಗತಿ, ಅಧ್ಯಾಪಕ ಸಂಯೋಜಕರಾಗಿ ಕಾರ್ತಿಕೇಶ, ಶ್ರೀ ಧ. ಮಂ. ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಬೆಳ್ತಂಗಡಿ ಇಂಟರಾಕ್ಟ ಕ್ಲಬ್ ನ ನೂತನ ಅಧ್ಯಕ್ಷರಾಗಿ ರಚಿತ್ ಶೆಟ್ಟಿ 9ನೇ ತರಗತಿ, ನೂತನ ಕಾರ್ಯದರ್ಶಿಯಾಗಿ ಪ್ರಾಶ್ಯ 8ನೇ ತರಗತಿ, ಅಧ್ಯಾಪಕ ಸಂಯೋಜಕರಾಗಿ ಮಂಜುನಾಥ, ಶ್ರೀ ಧ.ಮಂ. ಸಿ.ಬಿ.ಎಸ್.ಸಿ ಸ್ಕೂಲ್ ಉಜಿರೆ ಇಂಟರಾಕ್ಟ ಕ್ಲಬ್ ನ ನೂತನ ಅಧ್ಯಕ್ಷರಾಗಿ ಮಿಸ್ ಅವನಿ ಎಸ್., ನೂತನ ಕಾರ್ಯದರ್ಶಿಯಾಗಿ ಮಾಸ್ಟರ್ ಕ್ಷಿತಿಜ್, ಅಧ್ಯಾಪಕಿ ಸಂಯೋಜಕರಾಗಿ ಪ್ರಮೀಳ ಅಶೋಕ್, ಶ್ರೀ ಧ. ಮಂ. ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಉಜಿರೆ (ಸ್ಟೇಟ್ ಸಿಲೆಬಸ್) ಇಂಟರಾಕ್ಟ ಕ್ಲಬ್ ನ ನೂತನ ಅಧ್ಯಕ್ಷರಾಗಿ ಅಕ್ಷರ್ 9ನೇ ತರಗತಿ, ನೂತನ ಕಾರ್ಯದರ್ಶಿಯಾಗಿ ಸನ್ನಿಧಿ 9ನೇ ತರಗತಿ, ಅಧ್ಯಾಪಕ ಸಂಯೋಜಕರಾಗಿ ರಾಘವೇಂದ್ರ, ಶ್ರೀ ಧ.ಮಂ. ಅನುದಾನಿತ ಪ್ರೌಢ ಶಾಲೆ ಉಜಿರೆ ಇಂಟರಾಕ್ಟ ಕ್ಲಬ್ ನ ನೂತನ ಅಧ್ಯಕ್ಷರಾಗಿ ಕನಕಶ್ರೀ ಜೈನ್ 9ನೇ ತರಗತಿ, ನೂತನ ಕಾರ್ಯದರ್ಶಿಯಾಗಿ ಸ್ಪಂದನ 8ನೇ ತರಗತಿ, ಅಧ್ಯಾಪಕಿ ಸಂಯೋಜಕರಾಗಿ ಅರ್ಚನ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಬೆಳಾಲು ಇದರ ನೂತನ ಅಧ್ಯಕ್ಷರಾಗಿ ನೇತ್ರಾವತಿ 9ನೇ ತರಗತಿ, ನೂತನ ಕಾರ್ಯದರ್ಶಿಯಾಗಿ ಆತ್ಮಿ ಎನ್.ಎ. 9ನೇ ತರಗತಿ, ಅಧ್ಯಾಪಕ ಸಂಯೋಜಕರಾಗಿ ಕಿರಣ್ ಜೈನ್, ಸರಕಾರಿ ಪ್ರೌಢ ಶಾಲೆ ಬದನಾಜೆ ಇಂಟರಾಕ್ಟ ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಮಿಸ್ ಆಶಾ 9ನೇ ತರಗತಿ, ನೂತನ ಕಾರ್ಯದರ್ಶಿಯಾಗಿ ಮೋಕ್ಷಿತ್ 8ನೇ ತರಗತಿ, ಅಧ್ಯಾಪಕಿ ಸಂಯೋಜಕರಾಗಿ ಸುಮಂಗಲ ಜಯ ಅವರ ಪದಗ್ರಹಣ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here