ಕುವೆಟ್ಟು: ಸ.ಉ.ಹಿ.ಪ್ರಾ. ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

0

ಕುವೆಟ್ಟು: ಸ.ಉ.ಹಿ.ಪ್ರಾ. ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಶಾಲಾ ಇಕೋ ಕ್ಲಬ್ ಹಾಗೂ ಶಾಂತಿ ಶ್ರೀ ಮಹಿಳಾ ಸಮಾಜ ಬೆಳ್ತಂಗಡಿ ಅವರ ಪ್ರಾಯೋಜಕತ್ವದಲ್ಲಿ ಜರಗಿತು. ಶಾಲೆಯ 12 ಮಂದಿ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಪೋಷಕರೊಂದಿಗೆ ಗಿಡ ನೀಡುವುದಕ್ಕೆ ಸಸಿಗಳನ್ನು ವಿತರಿಸಲಾಯಿತು. ಅಲ್ಲದೆ ಆಗಮಿಸಿದ ಎಲ್ಲಾ ಅತಿಥಿಗಳಿಗೆ ಒಂದೊಂದು ಗಿಡವನ್ನು ವಿತರಿಸಲಾಯಿತು. ಶಾಲಾ ಆವರಣದಲ್ಲಿ ಇಕೋ ಕ್ಲಬ್ ಸದಸ್ಯರು ಹಾಗೂ ಶಾಂತಿ ಶ್ರೀ ಮಹಿಳಾ ಸಮಾಜದ ಸದಸ್ಯರು ಗಿಡಗಳನ್ನು ನೆಟ್ಟರು.

ಕಾರ್ಯಕ್ರಮದಲ್ಲಿ ಶಾಂತಿ ಶ್ರೀ ಮಹಿಳಾ ಸಮಾಜ ಬೆಳ್ತಂಗಡಿ ಅಧ್ಯಕ್ಷ ಪ್ರೊ. ತ್ರಿಶಾಲ್ ಜೈನ್, ಕಾರ್ಯದರ್ಶಿ ರಾಜಶ್ರೀ ಹೆಗ್ಡೆ, ಸದಸ್ಯರು ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷ ಸಿರಾಜ್ ಎಂ. ಚಿಲಿಂಬಿ, ಉಪಾಧ್ಯಕ್ಷೆ ಲಾವಣ್ಯ ಎಸ್. ಶೆಟ್ಟಿ ಮತ್ತು ಸದಸ್ಯರು, ಇಕೋ ಕ್ಲಬ್ ನ ಅಧ್ಯಕ್ಷೆ ರಾಯಿಶ, ನಿರ್ವಾಹಕಿ ಪ್ರಮೀಳಾ, ಮುಖ್ಯ ಶಿಕ್ಷಕ ಭಾಸ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಶಿಕ್ಷಕಿ ದವಲಾ ಎ., ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here