ಲಾಯಿಲ: ಕಳೆದ 24ವರ್ಷಗಳ ಹಿಂದೆ 18ಮಕ್ಕಳಿಂದ ಪ್ರಾರಂಭಿಸಿದ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ ಬೆಳ್ಳಿ ಹಬ್ಬದ ಸಂಭ್ರಮ. ಜು. 19ರಂದು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಉದ್ಘಾಟಿಸಿದರು. ಸ್ಥಾಪಕ ಮುಖ್ಯೋಪಾಧ್ಯಾಯಿನಿ ಸಿ| ಜಿನ್ಸಿ ಸೆಬಾಸ್ಟಿಯನ್, ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪ್ ಸಿಂಹ ನಾಯಕ್, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್
ಲಾಯಿಲ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಎಂ.ಕೆ., ಪಿ.ಟಿ.ಎ. ಅಧ್ಯಕ್ಷ ರೆಜಿ ಜಾರ್ಜ್ ವಿ.ವಿ., ಉಪಾಧ್ಯಕ್ಷೆ ಸುಮಿತಾ ಫರ್ನಾಂಡಿಸ್, ಹಳೆಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶೋದನ್, ಕಾರ್ಯದರ್ಶಿ ವೀಣಾ
ಸಂಚಾಲಕಿ ರೆ.ಸಿ. ಎಲ್ಸಿ ಪ್ಯಾಲೆಟ್ ಎಂ.ಎಸ್.ಎಮ್.ಐ., ಶಾಲಾ ಮುಖ್ಯೋಪಾಧ್ಯಾಯಿನಿ ರೆ.ಸಿ.ಪ್ರೀತಿ ಜಾರ್ಜ್ ಎಂ.ಎಸ್. ಎಂ.ಐ., ವಿದ್ಯಾರ್ಥಿ ನಾಯಕಿ ರಾಚೆಲ್ ಲಾಡ್ಲಿ ಮೋನಿಸ್,
ಸಿಬ್ಬಂದಿ ಮತ್ತು ಪಿ.ಟಿ.ಎ., ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.



ರೆ.ಸಿ. ಜಿನ್ಸಿ ಬಸ್ಟಿಯನ್ ಶಾಲಾ ಜಾಲತಾಣ ಬಿಡುಗಡೆಗೊಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸ್ವಾಗತಿಸಿದರು. ವರ್ನನ್ ಮೆಂಡೋನ್ಸ ಮತ್ತು ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರ ಸಂಘದ ಕಾರ್ಯದರ್ಶಿ ವೀಣಾ ವಂದಿಸಿದರು.