ಅಂತರಾಷ್ಟ್ರೀಯ ಶೈಕ್ಷಣಿಕ ಸಹಕಾರಕ್ಕೆ ಆಳ್ವಾಸ್ ಹಾಗೂ ಮಿಲಾ ವಿಶ್ವವಿದ್ಯಾಲಯದ ನಡುವೆ ಒಡಂಬಡಿಕೆ

0

ಬೆಳ್ತಂಗಡಿ: ಮೂಡುಬಿದಿರೆ ಅಳ್ವಾಸ್ ಇಂಜಿನಿಯರಿಂಗ್ ಕಾಲೇಜು ಹಾಗೂ ಮಲೇಶಿಯಾದ ಮಿಲಾ ವಿಶ್ವವಿದ್ಯಾಲಯದ ನಡುವೆ ಅಂತಾರಾಷ್ಟ್ರೀಯ ಸಹಕಾರಕ್ಕಾಗಿ ಕೈಕ್ಷಣಿಕ ಬಡಂಬಡಿಕೆಗೆ ಸಹಿ ಹಾಕಲಾಯಿತು.

ಮಿಲಾ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ ಡಾ. ದೀಪಕ್ ತಿರುಮಿಸಿ ಬಿಡಾ ಮತ್ತು ಅಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡೀಸ್ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಇತ್ತೀಚೆಗೆ ಎಂ.ಎಸ್. ರೇಮ್ಸ್ ಮೂಲಕ ಏರ್ಪಡಿಸಿದ್ದ ವರ್ಚುವಲ್ ಸಭೆಯಲ್ಲಿ ಎರಡು ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಮಿಲಾ ವಿಶ್ವವಿದ್ಯಾಲಯದ ಕುಲಪತಿ ಡಾ. ಜೇಸನ್ ಫಿಟ್ಟಿಮನ್ಸ್ ಸಂಶೋಧನೆ ಮತ್ತು ಉದ್ಯಮಶೀಲತೆ ವಿಭಾಗದ ಉಪಕುಲಪತಿ ಪ್ರೊ. ಗ್ರಾಹಮ್ ಕೆಂಡಲ್, ಅಕಾಡೆಮಿಕ್ ವ್ಯವಹಾರಗಳ ಉಪಕುಲಪತಿ ಪ್ರೊ. ಲೀ ಕ್ಯೂ. ಗಿಂಗ್ ಹಾಗೂ ಸಂಶೋಧನೆ ವಿಭಾಗದ ಸಹಾಯಕ ಉಪಕುಲಪತಿ ವಾಂಗ್ ಸಿಯೋ ಹಾಂಗ್ ಭಾಗವಹಿಸಿದ್ದರು.

ಆಳ್ವಾನ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ.ವಿ. ಸುರೇಶ್, ಪರೀಕ್ಷಾ ಕುಲಸಚಿವ ಡಾ. ಶಶಿಕಾಂತ ಕರಿಂಕಾ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು. ಡಾ.ಜೇಸನ್ ಫಿಟೈಮನ್ಸ್ ಹಾಗೂ ಡಾ. ಪೀಟರ್ ಫರ್ನಾಂಡೀಸ್ ಜಂಟಿ ಸಂಶೋಧನಾ ಯೋಜನೆಗಳ ಅನುಷ್ಠಾನ ಹಾಗೂ ವಿದ್ಯಾರ್ಥಿಗಳಿಗೆ ಇಂಟನ್ನಿಸ್ ಅವಕಾಶಗಳ ಅನುಷ್ಠಾನಕ್ಕೆ ಆಧ್ಯತೆ ನೀಡಲು ಸಹಮತ ವ್ಯಕ್ತಪಡಿಸಿದರು. ಈ ಒಪ್ಪಂದದ ಮೂಲಕ ವಿದ್ಯಾರ್ಥಿ ಮತ್ತು ಬೋಧಕ ವರ್ಗದ ವಿನಿಮಯ ಕಾರ್ಯಕ್ರಮಗಳು, ಪಂಟಿ ಸಂಶೋಧನಾ ಯೋಜನೆಗಳು ಇಂಟನ್ನಿಷ್ ಹಾಗೂ ತರಬೇತಿ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಸಹಯೋಗದ ಕಾರ್ಯಕ್ರಮಗಳು, ಸಾಂಸ್ಕೃತಿಕ ವಿನಿಮಯದಂತಹ ಹಲವಾರು ಉಪಯುಕ್ತ ಅವಕಾಶಗಳನ್ನು ಪಡೆಯಲು ಅವಕಾಶ ಲಭಿಸಲಿದೆ.

LEAVE A REPLY

Please enter your comment!
Please enter your name here