ಬೆಳ್ತಂಗಡಿ: ಕರಾಯ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಸಾರ್ವಜನಿಕ ಶತರುದ್ರಾಭಿಷೇಕ ಹಾಗೂ ತೀರ್ಥ ಮಂಟಪದ ಅನುಜ್ಞಾ ಕಲಶ ಕಾರ್ಯಕ್ರಮ ಜು.10ರಂದು ನಡೆಯಿತು. ವಿಧಿ ವಿಧಾನಗಳು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರಗಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯ, ಸದಸ್ಯರಾದ ಜಯವಿಕ್ರಮ ಕಲ್ಲಾಪು, ಕುಶಾಲಪ್ಪ ಗೌಡ, ಸೂರ, ದಯಾನಂದ ಪೂಜಾರಿ, ನಂದಿನಿ, ತೇಜಸ್ವಿನಿ, ಅರ್ಚಕ ಶಶಿಕಾಂತ್ ರಾವ್ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಸುದರ್ಶನ್ ಕೊಲ್ಲಿ ಪ್ರಮುಖರಾದ ಸಾಮ್ರಾಟ್ ಕರ್ಕೇರ, ಯುವರಾಜ್ ಆನಾರ್, ನವೀನ, ಅಣ್ಣು ಗೌಡ, ಸುಧೀರ್ ಕುಮಾರ್ ಹಲೇಜಿ, ದುರ್ಗೇಶ್ ಕೆದಿಲಾಯ. ರಾಜಶೇಖರ್ ರೈ, ಸುರೇಶ್ ಕೆ. ಸೀತಾರಾಮ, ಕಿಶೋರ್, ಹೇಮವಾತಿ, ಬೂದ, ಜಗದೀಶ್ ಶೆಟ್ಟಿ ಮೈರ, ಜನಾರ್ದನ ಮೊದಲಾದವರು ಉಪಸ್ಥಿತರಿದ್ದರು.