ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಬ್ರಹ್ಮಾನಂದ ಸರಸ್ವತಿ ಜೀ ಮಹಾರಾಜ ಅವರು ಲೋಕಕಲ್ಯಾಣಾರ್ಥವಾಗಿ
ಚಾತುರ್ಮಾಸ್ಯ ವ್ರತಾರಂಭವನ್ನು ಗುರು ಪೌರ್ಣಿಮೆಯ ಜು. 10ರಿಂದ ಆ. 20ರವರೆಗೆ ಉತ್ತರ ಕನ್ನಡ ಜಿಲ್ಲೆ ಕುಮುಟಾ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಆಚರಿಸಲಾಗುವುದು ಎಂದು ಸ್ವಾಮೀಜಿಯವರು ಜು. 3ರಂದು ಶ್ರೀ ರಾಮ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ಆದ್ಯಾತ್ಮಿಕ ಚಿಂತನೆಗಾಗಿ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿ ದಿನ, ಬೆಳಿಗ್ಗೆ, ಭಜನೆ, ಸಂಜೆ ರಾಮಾಯಣ, ಮಹಾ ಭಾರತ ಕಥೆ ಆಧಾರಿಸಿದ ಯಕ್ಷಗಾನ, ಹೆಸರಾಂತ ಕಲಾ ತಂಡ ಗಳಿಂದ ಭರತ ನಾಟ್ಯ, ಗೀತಾ ರೂಪಕ, ಕುಂಚ ಗೀತಾ ರಾಮ ಕಥಾ ಸುಗಮ ಸಂಗೀತ, ಭಕ್ತಿ ಪ್ರಧಾನ ಹತ್ತು ಹಲವು ಸಾಂಸ್ಕೃಕ ಕಾರ್ಯಕ್ರಮಗಳು ನಡೆಯಲಿದೆ.

ಧರ್ಮ ಜಾಗೃತಿಗಾಗಿ ಜಿಲ್ಲೆ, ಜಿಲ್ಲೆ ಗಳಲ್ಲಿ ಚಾತುರ್ಮಾಸ್ಯ ನಡೆಸುವ ಸಲುವಾಗಿ ಈ ಬಾರಿ 6ನೇ ವರ್ಷದ ತುರ್ಮಾಸ್ಯವನ್ನು ಉತ್ತರ ಕನ್ನಡ ಪರಿಸರದ ಭಕ್ತರ ಅನುಕೂಲ ಕ್ಕೆ ಮಾಡಲಾಗಿದೆ. ಮುಂದಕ್ಕೆ, ಹರಿದ್ವಾರ, ಅಯೋದ್ಯೆಯಲ್ಲಿ ಚಾತುರ್ಮಾಸ್ಯ ನಡೆಸಲಾಗುವುದು ಎಂದು ಸ್ವಾಮೀಜಿ ಹೇಳಿದರು. ಉತ್ತರ ಕನ್ನಡ ದ ಹೊನ್ನಾವರ ಕುಮಟಾದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಸಮಿತಿ, ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಇತರ ಸಂಘಟನೆ ಗಳು ಎಲ್ಲಾ ಪೂರ್ವ ಸಿದ್ಧತೆ ತಯಾರಿ ನಡೆಸುತ್ತಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ದೇವರ ಗುಡ್ಡೆ ದೇವಲಿಂಗೇಶ್ವರ ಭಕ್ತ ಮಂಡಳಿಯ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ, ಸಂಚಾಲಕ ನವೀನ್ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಸುನಿಲ್ ಕನ್ಯಾಡಿ, ಉಪಾಧ್ಯಕ್ಷ ರವೀಂದ್ರ ಪೂಜಾರಿ ಆರ್ಲ ಉಪಸ್ಥಿತರಿದ್ದರು.