ಉಜಿರೆ: ಬದನಾಜೆ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಜು.2ರಂದು ಪೋಷಕರ ಸಭೆ ನಡೆಯಿತು. ಶಾಲಾ ಪ್ರಭಾರ ಮುಖ್ಯಶಿಕ್ಷಕರು/ದೈಹಿಕ ಶಿಕ್ಷಕ ಸ್ವಾಗತಿಸುವುದರೊಂದಿಗೆ ಪ್ರಾಸ್ತಾವಿಕ ನುಡಿಯನ್ನಾಡಿದರು. 2025ರಿಂದ 28ರ ಸಾಲಿಗೆ ನೂತನ ಎಸ್. ಡಿ. ಎಂ. ಸಿ ರಚನೆ ಬಗ್ಗೆ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಮಾಹಿತಿ ನೀಡಿ ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದರು.
ನೂತನ ಎಸ್. ಡಿ. ಎಂ. ಸಿ ಅಧ್ಯಕ್ಷರಾಗಿ ಅನಿಲ್ ಡಿಸೋಜಾ ಮರು ಆಯ್ಕೆಯಾದರು. ಉಪಾಧ್ಯಕ್ಷೆಯಾಗಿ ನಾಗವೇಣಿ ಆಯ್ಕೆಯಾದರು. ಉಜಿರೆ ಹಳೆ ಪೇಟೆ ಸಮೂಹ ಸಂಪನ್ಮೂಲ ಅಧಿಕಾರಿ ಪ್ರತಿಮಾ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲಲಿತ ಕುಮಾರಿ ಅವರಿಗೆ ಎಸ್. ಡಿ. ಎಂ.ಸಿ ವತಿಯಿಂದ ಸನ್ಮಾನಿಸಲಾಯಿತು. ಪ್ರಸ್ತುತ ಮುಖ್ಯ ಶಿಕ್ಷಕರಾಗಿ ಅಧಿಕಾರ ಸ್ವೀಕರಿಸಿದ ನಿರಂಜನ್ ರಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಮಾತೃ ಸಂಘ ರಚನೆ ನಡೆಯಿತು. ಇದರ ಅಧ್ಯಕ್ಷರಾಗಿ ವಿಮಲಾ ಆಯ್ಕೆಗೊಂಡರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಇಲಿಯಾಸ್ ಬಿ.ಎಂ., ಗುರುಪ್ರಸಾದ್ ಕೋಟ್ಯಾನ್, ನಾಗವೇಣಿ, ಪ್ರೌಢಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಅರುಣಾಕ್ಷಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಜಮುನಾ, ಅಂಗನವಾಡಿ ಕಾರ್ಯಕರ್ತೆ ಹರ್ಷಿಣಿ, ಆಶಾ ಕಾರ್ಯಕರ್ತೆ ಭವಾನಿ ಉಪಸ್ಥಿತರಿದ್ದರು. ಶಿಕ್ಷಕಿ ಭಾರತಿ ಕಾರ್ಯಕ್ರಮ ನಿರೂಪಿಸಿದರು. ಜಯಂತಿ ಕುಮಾರಿ ವಂದಿಸಿದರು.