ಕಲ್ಮಂಜ ಪ್ರೌಢ ಶಾಲೆಯಲ್ಲಿ ಶಾಲಾ ನಾಯಕ ಸ್ಥಾನಕ್ಕೆ ಮತದಾನ

0

ನಿಡಿಗಲ್: ಕಲ್ಮಂಜ ಸರಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ನಾಯಕನ ಸ್ಥಾನಕ್ಕಾಗಿ ಮತದಾನ ಪ್ರಕ್ರಿಯೆ ನಡೆಯಿತು.

ಮೊಬೈಲ್ ಆಪ್ ಈವಿಎಂ ಮೂಲಕ ವಿದ್ಯಾರ್ಥಿಗಳು ಮತ ಚಲಾಯಿಸಿರು. ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ನಾಮಪತ್ರ ಸಲ್ಲಿಸುವುದು,ನಾಮಪತ್ರ ಹಿಂತೆಗೆದುಕೊಳ್ಳುವುದು, ಪ್ರಚಾರ ಮುಂತಾದ ಮತದಾನದ ವಿವಿಧ ಪ್ರಕ್ರಿಯೆಗಳಲ್ಲಿ ಭಾಗವಹಿಸಿದರು. ಹತ್ತನೆಯ ತರಗತಿಯ ತನ್ವಿತ್ ಎಸ್. ಬಿ. ಪ್ರಿಸೈಡಿಂಗ್ ಆಫೀಸರ್ ಆಗಿ ಚುನಾವಣಾ ಕಾರ್ಯ ನಡೆಸಿಕೊಟ್ಟರು. 9ನೇ ತರಗತಿಯ ಫಾತಿಮಾತುಲ್ ಸಹಲಾ, ಶ್ರೀರಕ್ಷಾ, ಚರಣ್ ಮತದಾನ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. 9ನೇ ತರಗತಿಯ ಸಂಪ್ರೀತ್ ಮತ್ತು ಸ್ವಸ್ತಿಕ್ ಆಚಾರ್ಯ ಪೊಲೀಸ್ ಅಧಿಕಾರಿಗಳಾಗಿ ಮತದಾನ ಕೇಂದ್ರಕ್ಕೆ ರಕ್ಷಣೆ ನೀಡಿದರು. ವಿದ್ಯಾರ್ಥಿಗಳು ತಮ್ಮ ಗುರುತು ಚೀಟಿಯನ್ನು ತೋರಿಸಿ ಮತದಾನ ಕೇಂದ್ರಕ್ಕೆ ಸರತಿಯ ಸಾಲಿನಲ್ಲಿ ಬಂದು ಮತ ಚಲಾಯಿಸಿ ತಮ್ಮ ಅಧಿಕಾರವನ್ನು ಚಲಾಯಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ವಸಂತಿ ಎಂ. ಮತ್ತು ಸಾವಿತ್ರಿ ಸಿ.ಡಿ. ಹಾಗೂ ಚೈತ್ರ ಅವರು ಮೊಬೈಲ್ ಆಪ್ ಬಳಸಿ ಮತದಾನ ಸುಗಮವಾಗಿ ನಡೆಯುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶಿಕ್ಷಕಿ ಹೇಮಲತಾ ಬಿ, ಮಾಲಿನಿ ಹೆಗಡೆ, ಪ್ರೇಮಲತಾ ಪಿ, ಸವಿತಾ, ಪ್ರೇಮಾ ಇವರು ಸಹಕಾರ ನೀಡಿದರು. ಮುಖ್ಯ ಶಿಕ್ಷಕಿ ಪೂರ್ಣಿಮಾ ವಿಜೇತ ಅಭ್ಯರ್ಥಿಯನ್ನು ಘೋಷಿಸಿದರು. 10ನೇ ತರಗತಿಯ ಜೀವನ್ ಸಾಲಿನ ಶಾಲಾ ನಾಯಕನಾಗಿ ಆಯ್ಕೆಯಾದರು.

LEAVE A REPLY

Please enter your comment!
Please enter your name here