ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠದಿಂದ ಮನಶ್ರೀಗೆ ಅಭಿನಂದನೆ

0

ಬೆಳಾಲು: ಜೂ.15ರಂದು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಹಾಗೂ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಬೆಳ್ತಂಗಡಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಬಿಜೆಪಿಯ ಸಕ್ರೀಯ ಕಾರ್ಯಕರ್ತ, ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬಿ.ಎಸ್. ಮತ್ತು ಯಶೋಧ ದಂಪತಿಗಳ ಪುತ್ರಿ ಮನಶ್ರೀ ಅವರನ್ನು ಬಿಜೆಪಿ ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ವತಿಯಿಂದ ಅಭಿನಂದಿಸಲಾಯಿತು‌.

ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಹಸಂಚಾಲಕ ಸಂದೀಪ್ ರೈ ಧರ್ಮಸ್ಥಳ, ಸಮಿತಿ ಸದಸ್ಯರಾದ ಅಜಿತ್ ಕುತ್ಲೂರು, ಕಿಶೋರ್ ಶಿರ್ಲಾಲು, ಸನತ್ ನಾಲ್ಕೂರು, ಯೋಗೀಶ್ ಗೌಡ ಕಾಯರ್ತಡ್ಕ, ಲೋಕೇಶ್ ಬೆಳಾಲು ಹಾಗೂ ಮನೆಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here